Select Your Language

Notifications

webdunia
webdunia
webdunia
webdunia

ಸತ್ತ ಹೆಂಡತಿಯೊಂದಿಗೆ ಆರು ದಿನ ಒಂದೇ ರೂಂನಲ್ಲಿ ಕಳೆದ!

ಸತ್ತ ಹೆಂಡತಿಯೊಂದಿಗೆ ಆರು ದಿನ ಒಂದೇ ರೂಂನಲ್ಲಿ ಕಳೆದ!
London , ಬುಧವಾರ, 10 ಮೇ 2017 (09:09 IST)
ಲಂಡನ್: ಪ್ರೀತಿ ಪಾತ್ರರು ಸತ್ತಾಗ ನಮಗೆ ಅತೀವ ದುಃಖವಾಗುವುದು ಸಹಜ. ಅವರನ್ನು ಬೀಳ್ಕೊಡಲು ಮನಸ್ಸಾಗುವುದೇ ಇಲ್ಲ. ಹಾಗೆಂದು ಇಲ್ಲೊಬ್ಬ ವ್ಯಕ್ತಿ ಮಾಡಿದ್ದೇನು ಗೊತ್ತಾ?

 
ತನ್ನ ಪತ್ನಿಯ  ಮೃತದೇಹದೊಂದಿಗೆ ಆರು ದಿನ ಒಂದೇ ರೂಂನಲ್ಲಿ ಮಲಗಿಕೊಂಡು ಕಳೆದ! ಹೌದು ಇದು ವಿಚಿತ್ರವಾದರೂ ಸತ್ಯ. ಬ್ರಿಟನ್ ನಲ್ಲಿ ಇಂತಹದ್ದೊಂದು ಘಟನೆ ನಡೆದಿದೆ.

ಗರ್ಭಕೋಶದ ಕ್ಯಾನ್ಸರ್ ಗೆ ತುತ್ತಾಗಿ ವೆಂಡಿ ಡೇವಿಸನ್ ಎಂಬಾತನ ಪತ್ನಿ ರಸೆಲ್ ತೀರಿಕೊಂಡಿದ್ದಳು. ಇದರಿಂದ ತೀವ್ರ ದುಃಖಿತನಾದ ಡೇವಿಸನ್, ತನ್ನ ಪತ್ನಿಯ ಮೃತದೇಹವನ್ನು ಸ್ಮಶಾನಕ್ಕೆ ಕರೆದೊಯ್ಯಲು ಒಪ್ಪಲಿಲ್ಲ. ಬದಲಿಗೆ ಸಾವಿಗೇ ಚಾಲೆಂಜ್ ಹಾಕಲು ನಿರ್ಧರಿಸಿದರು.

ಅದಕ್ಕಾಗಿ ಪತ್ನಿಯ ಮೃತದೇಹವನ್ನು ತಮ್ಮ ಬೆಡ್ ರೂಂನಲ್ಲಿಟ್ಟುಕೊಂಡು ಆರು ದಿನ ಕಳೆದರು. ಈ ರೀತಿ ಮೃತದೇಹವನ್ನು ಹೂಳದೇ ಇಡಲು ಅವರಿಗೆ ನ್ಯಾಯಾಲಯದ ಅನುಮತಿಯೂ ಸಿಕ್ಕದೆಯಂತೆ. ಪತ್ನಿ ಮೇಲೆ ಅದೆಂತಹಾ ಪ್ರೀತಿಯೋ ಈತನದ್ದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡ ಕುಲಭೂಷಣ್ ಜಾದವ್