Select Your Language

Notifications

webdunia
webdunia
webdunia
webdunia

ಗನ್‌ ಒಯ್ಯುವುದು ಅಮೆರಿಕನ್ನರ ಮೂಲಭೂತ ಹಕ್ಕು: ಸುಪ್ರೀಂ

ಗನ್‌ ಒಯ್ಯುವುದು ಅಮೆರಿಕನ್ನರ ಮೂಲಭೂತ ಹಕ್ಕು: ಸುಪ್ರೀಂ
ವಾಷಿಂಗ್ಟನ್ , ಶನಿವಾರ, 25 ಜೂನ್ 2022 (08:24 IST)
ವಾಷಿಂಗ್ಟನ್ : ಅಮೆರಿಕನ್ನರು ಸಾರ್ವಜನಿಕವಾಗಿ ಬಂದೂಕುಗಳನ್ನು ಒಯ್ಯುವ ಮೂಲಭೂತ ಹಕ್ಕನ್ನು ಹೊಂದಿದ್ದಾರೆ ಎಂದು ಯುಎಸ್ ಸುಪ್ರೀಂ ಕೋರ್ಟ್ ಗುರುವಾರ ತೀರ್ಪು ನೀಡಿದೆ.

ಅಮೆರಿಕದ ಶಾಲಾ-ಕಾಲೇಜುಗಳಲ್ಲಿ ಸಾರ್ವಜನಿಕವಾಗಿ ಗುಂಡಿನ ದಾಳಿ ನಡೆಸುತ್ತಿರುವ ಪ್ರಕರಣಗಳು ವರದಿಯಾಗುತ್ತಲೇ ಇವೆ. ಇಂತಹ ಸನ್ನಿವೇಶದಲ್ಲೇ ಸುಪ್ರೀಂ ಕೋರ್ಟ್ ತೀರ್ಪನ್ನು ಪ್ರಕಟಿಸಿದೆ.  

ವ್ಯಕ್ತಿ ಕಾನೂನುಬದ್ಧ ಸ್ವರಕ್ಷಣೆ ಅಗತ್ಯವಿದೆ ಎಂದು ಸಾಬೀತುಪಡಿಸಲು ಬಂದೂಕು ಪರವಾನಗಿಯನ್ನು ಪಡೆಯಬಹುದು. ಬಂದೂಕುಗಳನ್ನು ಹೊಂದಿರುವ ಜನರನ್ನು ನಿರ್ಬಂಧಿಸುವ ರಾಜ್ಯಗಳ ಕಾನೂನುಗಳಿಗೂ ಈ ತೀರ್ಪು ಬ್ರೇಕ್ ನೀಡಿದೆ.

ಮೇ ತಿಂಗಳಲ್ಲಿ ಎರಡು ಸಾಮೂಹಿಕ ಗುಂಡಿನ ದಾಳಿಯ ನಂತರ ಬಂದೂಕುಗಳಿಗೆ ಕಡಿವಾಣ ಹಾಕುವಂತೆ ಒತ್ತಾಯಗಳು ಕೇಳಿಬರುತ್ತಿವೆ.

ಈ ಸಂದರ್ಭದಲ್ಲಿ ನ್ಯಾಯಾಲಯ, US ಸಂವಿಧಾನವು ಬಂದೂಕುಗಳನ್ನು ಹೊಂದುವ ಮತ್ತು ಸಾರ್ವಜನಿಕವಾಗಿ ಜೊತೆಯಲ್ಲಿ ಒಯ್ಯುವ ಹಕ್ಕನ್ನು ಖಾತರಿಪಡಿಸುತ್ತದೆ ಎಂದು ವಾದಿಸಿದ ವಕೀಲರ ಪರವಾಗಿ ತೀರ್ಪು ನೀಡಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಬಿಬಿಎಂಪಿಯ ಪುನರ್ ವಿಂಗಡಣೆಯ ಕರಡು ಪಟ್ಟಿಯನ್ನು ಪ್ರಕಟ