ಮದುವೆ ಸಮಾರಂಭ ಎಂದ ಮೇಲೆ ಸಂಭ್ರಮ, ಜೋಶ್, ಕುಣಿತ ಸಾಮಾನ್ಯ. ಮದುಮಕ್ಕಳೇ ಅಲ್ಲಿ ಅಲ್ಲಿ ಕೇಂದ್ರ ಬಿಂದು. ಆದರೆ ಜೋಶ್‌ನಲ್ಲಿ ಮದುವೆ ಮಗನನ್ನೇ ಮೇಲಕ್ಕೆ ಹಾರಿಸಿ ಕೆಳಕ್ಕೆ ಬೀಳಿಸಿದ ಘಟನೆ ಕಝಕಿಸ್ತಾನದಲ್ಲಿ ನಡೆದಿದೆ.
ಮದುವೆ ಮನೆಯಲ್ಲಿ ಖುಷಿಯಿಂದ ಡ್ಯಾನ್ಸ್ ಮಾಡುತ್ತಿದ್ದ ಜೋಶ್‍ನಲ್ಲಿ ಆತನ ಸ್ನೇಹಿತರು ಮದುಮಗನನ್ನ ಹಿಡಿದು ಮೇಲಕ್ಕೆ ಎಸೆದು ಕ್ಯಾಚ್ ಹಿಡಿದರು. ಎರಡನೇ ಬಾರಿಗೆ ಇದನ್ನು ಪುನರಾವರ್ತಿಸಿದಾಗ ಕೈ ತಪ್ಪಿ ಆತ ಕೆಳಕ್ಕೆ ಬಿದ್ದ. ಅದು ಕೂಡ ವಧುವಿನ ಕಾಲಿನ ಬಳಿ. ಆತನ ತಲೆಗೂ ಪೆಟ್ಟಾಯಿತು. ಆದರೂ ಆತನ ಸ್ನೇಹಿತರು ಮೇಲಕ್ಕೆ ಎಸೆಯುವುದನ್ನು ಬಿಡಲಿಲ್ಲ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಜೋಶ್‌ನಲ್ಲಿ ಮದುಮಗನನ್ನೇ ಮೇಲಕ್ಕೆ ಹಾರಿಸಿ ಕೆಳಕ್ಕೆ ಬೀಳಿಸಿದ್ರು...