ಇಸ್ಲಮಾಬಾದ್(ಆ.13): ಅಣ್ವಸ್ತ್ರವನ್ನು ಹೊತ್ತೊಯ್ಯುವ ಸಾಮರ್ಥ್ಯವಿರುವ ಭೂಮಿಯಿಂದ ಭೂಮಿಗೆ ಹಾರುವ ಖಂಡಾಂತರ ಕ್ಷಿಪಣಿ ಘಜ್ನವಿ ಪರೀಕ್ಷೆಯನ್ನು ಗುರುವಾರ ಯಶಸ್ವಿಯಾಗಿ ಪಾಕಿಸ್ತಾನ ನಡೆಸಿದೆ. ಈ ಕ್ಷಿಪಣಿ 290 ಕಿ.ಮೀ ದೂರದ ಗುರಿಯವರೆಗೆ ದಾಳಿ ನಡೆಸಬಲ್ಲದು ಎಂದು ಪಾಕಿಸ್ತಾನ ಸೇನೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದರಿಂದಾಗಿ ಭಾರತದ ಗಡಿ ದಾಟುವ ತಲುಪುವ ಸಾಮರ್ಥ್ಯ ಇದಕ್ಕಿದೆ ಎಂಬುದು ದೃಢಪಟ್ಟಿದೆ.
ಘಜ್ನವಿ ಕ್ಷಿಪಣಿಯು ಯಶಸ್ವಿಯಾಗಿದ್ದು ಪಾಕಿಸ್ತಾನದ ಸೈನಿಕ ಬಲವನ್ನು ಮತ್ತಷ್ಟುಹೆಚ್ಚಿಸಿದೆ. ಈ ಕ್ಷಿಪಣಿ ಅಣ್ವಸ್ತ್ರ ಒಳಗೊಂಡಂತೆ ವಿವಿಧ ಸಿಡಿತಕಲೆಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಇದು 290 ಕಿ.ಮೀ ದೂರ ಚಲಿಸಬಲ್ಲದು ಎಂದು ಸೇನೆಯ ಕಮಾಂಡರ್ ಹೇಳಿದ್ದಾರೆ.
ಪಾಕಿಸ್ತಾನದ ರಾಷ್ಟ್ರಪತಿ ಆರಿಫ್ ಅಲ್ವಿ, ಪ್ರಧಾನಿ ಇಮ್ರಾನ್ ಖಾನ್ ಸೇರದಂತೆ ಹಲವು ಗಣ್ಯರು ಯಶಸ್ವಿ ಪರೀಕ್ಷೆಗಾಗಿ ಪಾಕಿಸ್ತಾನ ಸೇನೆಗೆ ಶುಭಾಶಯ ಕೋರಿದ್ದಾರೆ