Select Your Language

Notifications

webdunia
webdunia
webdunia
webdunia

ಅಮೇರಿಕದ ಶಾಪಿಂಗ್ ಮಾಲ್‌ನಲ್ಲಿ ಶೂಟ್ ಔಟ್: ನಾಲ್ವರ ಹತ್ಯೆ

ಅಮೇರಿಕದ ಶಾಪಿಂಗ್ ಮಾಲ್‌ನಲ್ಲಿ ಶೂಟ್ ಔಟ್: ನಾಲ್ವರ ಹತ್ಯೆ
ವಾಷಿಂಗ್ಟನ್ , ಶನಿವಾರ, 24 ಸೆಪ್ಟಂಬರ್ 2016 (10:18 IST)
ಅಮೇರಿಕದ ವಾಷಿಂಗ್ಟನ್‌ನ ಶಾಪಿಂಗ್ ಮಾಲ್ ಒಂದರಲ್ಲಿ ಗುಂಡಿನ ದಾಳಿ ನಡೆದಿದ್ದು ನಾಲ್ವರು ಅಮಾಯಕರು ದಾರುಣವಾಗಿ ಸಾವನ್ನಪ್ಪಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ. 
ಬುರ್ಲಿಂಗ್ಟನ್‌ನಲ್ಲಿರುವ ಕ್ಯಾಸ್ಕೇಡ್ ಶಾಪಿಂಗ್ ಮಾಲ್ ಒಂದಕ್ಕೆ ನುಗ್ಗಿದ ಅಪರಿಚಿತ ಬಂದೂಕುಧಾರಿಗಳು ಮನ ಬಂದಂತೆ ಗುಂಡು ಹಾರಿಸಿದ್ದಾರೆ. ಪರಿಣಾಮ ನಾಲ್ವರು ಗ್ರಾಹಕರು ಸಾವನ್ನಪ್ಪಿದ್ದಾರೆ. ಹಲವರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 
 
ಯಾವ ಕಾರಣಕ್ಕೆ ದಾಳಿ ನಡೆಸಲಾಯ್ತು, ಕೃತ್ಯದ ಹಿಂದೆ ಭಯೋತ್ಪಾದಕರ ಪಾತ್ರವಿದೆಯೋ ಎಂಬ ಬಗ್ಗೆ ಇನ್ನು ತಿಳಿದು ಬಂದಿಲ್ಲ.
 
ಕಾರ್ಯಾಚರಣೆ ಕೈಗೊಂಡಿರುವ ಭದ್ರತಾ ಪಡೆಗಳು ಒಬ್ಬ ದಾಳಿಕೋರನನ್ನು ಹತ್ಯೆಗೈಯ್ಯಲು ಸಫಲರಾಗಿದ್ದಾರೆ. 

ಘಟನೆಗೂ ಮುನ್ನ ಆರೋಪಿಗಳು ಮಾಲ್ ಸುತ್ತಮುತ್ತ ಓಡಾಡಿರುವ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ದೇವರನಾಡಿಗೆ ಇಂದು ಪ್ರಧಾನಿ