Webdunia - Bharat's app for daily news and videos

Install App

ಸೆಕ್ಸ್ ಗೊಂಬೆಯನ್ನು ಸ್ವರ್ಗದಿಂದ ಇಳಿದ ದೇವತೆಯೆಂದು ಭ್ರಮಿಸಿದ ಜನರು

Webdunia
ಗುರುವಾರ, 5 ಮೇ 2016 (16:45 IST)
ಇಂಡೋನೇಶಿಯಾದ ಸುಲವೇಸಿ ಪ್ರಾಂತ್ಯದ ಬಾಂಗಿ ದ್ವೀಪದಲ್ಲಿ  ಸೋಜಿಗದ ಸಂಗತಿ ಸಂಭವಿಸಿದೆ. ಅಲ್ಲಿನ ಮೀನುಗಾರರು ಮೀನು ಹಿಡಿಯಲು ಸಮುದ್ರಕ್ಕೆ ಇಳಿದಿದ್ದಾಗ ಬಾಲಕಿಯ ಗೊಂಬೆಯೊಂದು ಸಿಕ್ಕಿತು. ಅದು ತಮ್ಮನ್ನು ರಕ್ಷಿಸಲು ಬಂದಿರುವ ದೇವತೆಯೆಂದು ಊರಿನ ಜನರು ಭಾವಿಸಿದರು. ಕಾಲುಪಪ್ಪಿ ಗ್ರಾಮದ ಮೀನುಗಾರರ ಕುಟುಂಬ ಆ ಗೊಂಬೆಗೆ ತಲೆಯಿಂದ ಪಾದದವರೆಗೆ ಉಡುಪಿನಿಂದ ಅಲಂಕರಿಸಿ ತಲೆಯ ಮೇಲೆ ಹಿಜಬ್ ಸಹ ಹಾಕಿದರು. 
 
 ಜನರು ಆ ಗೊಂಬೆಯನ್ನು ದೋಣಿವಿಹಾರಕ್ಕೆ ಮತ್ತು ಸಮುದ್ರದಲ್ಲಿ ಸಾಹಸಕ್ಕೆ ಒಯ್ಯುತ್ತಿದ್ದರು. ಗೊಂಬೆಯ ಚಿತ್ರವು ಅಂತರ್ಜಾಲದಲ್ಲಿ ಹರಿದಾಡಿದಾಗ ಪೊಲೀಸ್ ಇಲಾಖೆ ಅದನ್ನು ಗಾಳಿತುಂಬುವ  ಸೆಕ್ಸ್ ಗೊಂಬೆಯೆಂದು ಮನಗಂಡು ವಶಕ್ಕೆ ಪಡೆದರು.  ಸೆಕ್ಸ್ ಗೊಂಬೆಯು ಬಿಡದಾರಿ ಅಂದರೆ ದೇವತೆಯ ಆತ್ಮವೆಂದು ಸ್ಥಳೀಯ ಭಾಷೆಯಲ್ಲಿ ಕರೆಯುತ್ತಿದ್ದರು. ಸ್ಥಳೀಯರು ಅದನ್ನು ಪತ್ತೆಹಚ್ಚಿದಾಗ ಅದು ದಾರಿ ತಪ್ಪಿದ ಮಗುವಿನಂತೆ ಅಳುತ್ತಿತ್ತೆಂದು ಹೇಳಿದ್ದಾರೆ.
 
ಇಂಡೋನೇಶಿಯಾದ ಜನರಿಗೆ ಆತ್ಮಗಳು ಮತ್ತು ದೇವತೆಯರ ಅಸ್ತಿತ್ವ ಕುರಿತು ಪ್ರಬಲ ನಂಬಿಕೆಯಿದ್ದು ಅವುಗಳನ್ನು ಬಿಡದಾರಿ ಎಂದು ಕರೆಯುತ್ತಾರೆ. ಸೂರ್ಯಗ್ರಹಣ ಸಂಭವಿಸಿದ ಮರುಗಳಿಗೆಯೇ ಈ ಗೊಂಬೆ ಸಿಕ್ಕಿದ್ದರಿಂದ ಇದು ಸ್ವರ್ಗದಿಂದ ಇಳಿದುಬಂದ ನಿಗೂಢ ದೇವತೆ ಎಂದೇ ಭಾವಿಸಿದ್ದರು. ಆದರೆ ಆ ಗೊಂಬೆಯನ್ನು ವಾಸ್ತವವಾಗಿ ಯಾವುದಕ್ಕೆ ಬಳಸಲಾಗುತ್ತಿತ್ತು ಎಂಬ ಕಲ್ಪನೆಯೇ ಗ್ರಾಮದ ಜನರಿಗೆ ಇರಲಿಲ್ಲ.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ .

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕಸ ಹಾಕಿದ್ದಕ್ಕೆ ವೃದ್ಧೆಯನ್ನು ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ, ಕ್ರೂರತೆಗೆ ಭಾರೀ ಆಕ್ರೋಶ

Video: ಏಕಾಏಕಿ ಉಕ್ಕಿ ಹರಿದ ಜಲಪಾತ, ಪವಾಡ ಸದೃಶ್ಯ 6 ಮಹಿಳೆಯರು ಪಾರು

ಸುರ್ಜೇವಾಲನೂ ಬರ್ತಾರೆ, ಮುಂದೆ ರಾಹುಲ್ ಗಾಂಧಿನೂ ಬರಬೇಕಾಗುತ್ತದೆ

ಪುತ್ತೂರು ಬಿಜೆಪಿ ಮುಖಂಡನ ಮಗನಿಂದ ವಂಚನೆಗೊಳಗಾದ ಯುವತಿ ಗಂಡು ಮಗುವಿಗೆ ಜನನ

ಲಿವ್‌ ಇನ್‌ ಸಂಗಾತಿಯನ್ನು ಕೊಂದು ಬಿಬಿಎಂಪಿ ಕಸದ ಲಾರಿಗೆ ಎಸೆದ ಪ್ರಿಯಕರ

ಮುಂದಿನ ಸುದ್ದಿ