Select Your Language

Notifications

webdunia
webdunia
webdunia
webdunia

ಅಮೆರಿಕ ರಾಜ್ಯ ಕಾರ್ಯದರ್ಶಿ ಚೀನಾಗೆ ಮೊದಲ ಭೇಟಿ

ಅಮೆರಿಕ ರಾಜ್ಯ ಕಾರ್ಯದರ್ಶಿ ಚೀನಾಗೆ ಮೊದಲ ಭೇಟಿ
ಬೀಜಿಂಗ್ , ಸೋಮವಾರ, 19 ಜೂನ್ 2023 (10:21 IST)
ಬೀಜಿಂಗ್ : ವಿಶ್ವದ ದೊಡ್ಡ ರಾಷ್ಟ್ರಗಳಾದ ಅಮೆರಿಕ ಮತ್ತು ಚೀನಾ ನಡುವೆ ನಿರಂತರ ಸಂಘರ್ಷ ನಡೆಯುತ್ತಿರುತ್ತದೆ. ಈ ಹೊತ್ತಿನಲ್ಲಿ 5 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಯುಎಸ್ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಚೀನಾಗೆ ಭೇಟಿ ನೀಡಿರುವುದು ಕುತೂಹಲ ಮೂಡಿಸಿದೆ.
 
ನವೆಂಬರ್ನಲ್ಲಿ ಇಂಡೋನೇಷ್ಯಾದ ಬಾಲಿಯಲ್ಲಿ ನಡೆದ ಜಿ 20 ಶೃಂಗಸಭೆಯಲ್ಲಿ ಯುಎಸ್ ಅಧ್ಯಕ್ಷ ಜೋ ಬೈಡನ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಪರಸ್ಪರ ಹಸ್ತಲಾಘವದ ಮೂಲಕ ಶುಭಾಶಯ ಕೋರಿದ್ದರು. ಬೈಡನ್ ಯುಎಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಅದು ಅವರ ಮೊದಲ ಅಧಿಕೃತ ಸಭೆಯಾಗಿತ್ತು. 

ಈ ಸೌಹಾರ್ದಯುತ ಶೃಂಗಸಭೆಯ ಫಲವಾಗಿ ಬ್ಲಿಂಕೆನ್ ನಾಲ್ಕು ತಿಂಗಳ ಹಿಂದೆ ಚೀನಾಕ್ಕೆ ಭೇಟಿ ನೀಡಬೇಕಿತ್ತು. ಆದರೆ ಅಮೆರಿಕದ ವಾಯುಗಡಿಯ ಅಟ್ಲಾಂಟಿಕಾ ಸಮುದ್ರ ವ್ಯಾಪ್ತಿಯಲ್ಲಿ ಹಾರಾಟ ನಡೆಸುತ್ತಿದ್ದ, ಚೀನಾದ ಶಂಕಿತ ಕಣ್ಗಾವಲು ಬಲೂನ್ ಅನ್ನು ಅಮೆರಿಕ ಸೇನೆಯು ಹೊಡೆದುರುಳಿಸಿತ್ತು. ಇದರಿಂದ ಎರಡೂ ದೇಶಗಳ ನಡುವೆ ಮತ್ತಷ್ಟು ಉದ್ವಿಘ್ನತೆ ಉಂಟಾಯಿತು. ಹೀಗಾಗಿ ಬ್ಲಿಂಕೆನ್ ತಮ್ಮ ಪ್ರವಾಸವನ್ನು ಮುಂದೂಡಬೇಕಾಯಿತು.

ಈಗ ಬ್ಲಿಂಕನ್ ಚೀನಾಗೆ 2 ದಿನಗಳ ಪ್ರವಾಸ ಕೈಗೊಂಡಿದ್ದಾರೆ. ʼಎರಡೂ ದೇಶಗಳ ನಡುವಿನ ತಪ್ಪಾದ ಲೆಕ್ಕಾಚಾರಗಳನ್ನು ಸರಿ ಮಾಡುವ ಮಾರ್ಗಗಳನ್ನು ಕಂಡುಕೊಳ್ಳಲು ಹಾಗೂ ನಮ್ಮ ಉತ್ತಮ ಸಂಬಂಧವನ್ನು ಜವಾಬ್ದಾರಿಯುತವಾಗಿ ನಿರ್ವಹಿಸಲು ಪ್ರಯತ್ನಿಸುವುದಾಗಿʼ ಬ್ಲಿಂಕೆನ್ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಯಾನಕ ಅಣ್ವಸ್ತ್ರ ಹೊರತೆಗೆದ ರಷ್ಯಾ