Select Your Language

Notifications

webdunia
webdunia
webdunia
webdunia

2 ಗಂಟೆಯಲ್ಲೇ ಜನರ ಮೇಲೆ ಹೇಗೆಲ್ಲಾ ದಾಳಿ ಮಾಡ್ತಾ ಗೊತ್ತಾ ಈ ನಾಯಿ.! ವಿಡಿಯೋ

ನಾಯಿ ದಾಳಿ
ಚೀನಾ , ಮಂಗಳವಾರ, 9 ಆಗಸ್ಟ್ 2016 (09:48 IST)
ರಸ್ತೆ ಮೇಲೆ  ಬೀದಿ ನಾಯಿಗಳು ಹೆಚ್ಚಾದಂತೆ ಜನರ ನಡೆದಾಡೋಕೆ ಆಗಲ್ಲ.. ರಸ್ತೆ ಬದಿಗಳಲ್ಲಿ ನಡೆದಾಡುವ ಜನರು ನಾಯಿಗಳಿಂದ ಸದಾ ಭಯದಲ್ಲೇ ಓಡಾಡುವ ಸ್ಥಿತಿ ಎದುರಾಗುತ್ತದೆ.. ಇದಕ್ಕೆ ತಾಜಾ ಉದಾಹರಣೆವೆಂಬಂತೆ ಇಲ್ಲೊಂದು ಘಟನೆ ನಡೆದಿದೆ.
 
 
ಬೀದಿ ನಾಯಿ 2 ಗಂಟೆಯಲ್ಲೇ ಸುಮಾರು 20ಕ್ಕೂ ಅಧಿಕ ಜನರ ಮೇಲೆ ದಾಳಿ ನಡೆಸಿದ ಘಟನೆ ಚೀನಾದಲ್ಲಿ ನಡೆದಿದೆ.. ಈ ವೇಳೆ ರಸ್ತೆ ಮೇಲೆ ಬರುತ್ತಿದ್ದ 8 ವರ್ಷದ ಬಾಲಕ ಹಾಗೂ 70 ವೃದ್ಧನ ಮೇಲೆ ದಾಳಿ ಮಾಡಿದ್ದಲ್ಲದೇ 20ಕ್ಕೂ ಅಧಿಕ ಜನರನ್ನು ಈ ನಾಯಿ ಗಾಯಗೊಳಿಸಿದೆ.
 
ಗಿಝಾವ್ ಪ್ರಾಂತ್ಯದಲ್ಲಿ ನಾಯಿ ರಸ್ತೆಯಲ್ಲಿ ಅನೇಕ ಜನರ ಮೇಲೆ ದಾಳಿ ಮಾಡಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸುಮ್ಮನೆ ಬರುತ್ತಿದ್ದವರ, ನಿಂತವರ ಮೇಲೆ ದಾಳಿ ಮಾಡಿ ಕಚ್ಚಿದೆ.. ಈ ನಾಯಿಯಿಂದ ಪಾರಾಗಲೂ ಎಷ್ಟೇ ಹರಸಾಹಸ ಪಟ್ಟರು ನಾಯಿ ಮಾತ್ರ ಮತ್ತೆ ಮತ್ತೆ ದಾಳಿ ಮಾಡುತ್ತಾ ಇತ್ತು. ಈ ವೇಳೆ ಮತ್ತೊಬ್ಬ ಮಹಿಳೆಯ ಮೇಲೆ ನಾಯಿ ದಾಳಿ ಮಾಡಿದಾಗ ಆಕೆ ತನ್ನ ಬ್ಯಾಗ್‌ನಿಂದ ಹೊಡೆದು ಪಾರಾಗಿದ್ದಾಳೆ.
 
ಈ ವೇಳೆ ದೂರಿನ ಮೇರೆಗೆ ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು ನಾಯಿಯನನ್ನು ಗುಂಡಿಕ್ಕಿ ಕೊಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 
 

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯ ಸಾರಿಗೆ ನೌಕರರಿಗೆ ಸಿಹಿ ಸುದ್ದಿ