ಮೆಡಿಟರೇನಿಯನ್ ಸಮುದ್ರದಲ್ಲಿ ಅಪಘಾತಕ್ಕೀಡಾದ ಈಜಿಪ್ಟ್ ಏರ್ ವಿಮಾನದ ಅವಶೇಷಗಳನ್ನು ಶೋಧ ತಂಡಗಳು ಪತ್ತೆಹಚ್ಚಿವೆ ಎಂದು ಈಜಿಪ್ಟ್ ಮಿಲಿಟರಿ ತಿಳಿಸಿದೆ.
ಈಜಿಪ್ಟ್ ವಿಮಾನ ಮತ್ತು ನೌಕಾ ದೋಣಿಗಳು ಅಲೆಕ್ಸಾಂಡ್ರಿಯಾಗದೆ 290 ಕಿಮೀ ದೂರದಲ್ಲಿ ಪ್ರಯಾಣಿಕರ ವೈಯಕ್ತಿಕ ವಸ್ತುಗಳು ಮತ್ತು ವಿಮಾನದ ಅವಶೇಷಗಳನ್ನು ಪತ್ತೆಹಚ್ಚಿರುವುದಾಗಿ ಅದರ ವಕ್ತಾರ ತನ್ನ ಫೇಸ್‌ಬುಕ್ ಪುಟದಲ್ಲಿ ಬರೆದಿದ್ದಾರೆ.
ಪ್ಯಾರಿಸ್‌ನಿಂದ ಕೈರೋಗೆ ಈಜಿಪ್ಟ್ ಏರ್ ವಿಮಾನ ಪ್ರಯಾಣಿಸುತ್ತಿದ್ದಾಗ ರಡಾರ್ ಸ್ಕ್ರೀನ್‌ನಿಂದ ಕಣ್ಮರೆಯಾಗಿತ್ತು. ಪ್ಯಾರಿಸ್‌ನ ಚಾರ್ಲ್ಸ ಡಿ ಗಾಲೆ ವಿಮಾನನಿಲ್ದಾಣದಿಂದ ಇದು ಹೊರಟಿತ್ತು. ಆದರೆ ಈಗ ಅಪಘಾತದ ಅವಶೇಷಗಳು ಸಿಕ್ಕಿರುವುದರಿಂದ ಯಾರೊಬ್ಬರೂ ಜೀವಂತವಾಗಿ ಉಳಿದಿಲ್ಲ ಎನ್ನುವುದು ದೃಢಪಟ್ಟಿದೆ. ವಿಮಾನದಲ್ಲಿ 56 ಪ್ರಯಾಣಿಕರು ಮತ್ತು 10 ಮಂದಿ ಸಿಬ್ಬಂದಿಗಳಿದ್ದರು. ಬ್ರಿಟಿಷ್ ಭೂಗೋಳತಜ್ಞ ರಿಚರ್ಡ್ ಓಸ್ಮನ್ ಕೂಡ ವಿಮಾನದಲ್ಲಿದ್ದು ಅಪಘಾತದಲ್ಲಿ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.
ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.