ಕೇಂದ್ರ ಇಟಲಿಯಲ್ಲಿ ಬುಧವಾರ ಮುಂಜಾನೆ ಭಾರೀ ಭೂಕಂಪ ಸಂಭವಿಸಿದ್ದು ಕನಿಷ್ಠ ಆರು ಜನರು ದುರ್ಮರವನ್ನಪ್ಪಿದ್ದಾರೆ.
ಮುಂಜಾನೆ 03:36 ( 01:36 GMT)ರ ಸುಮಾರಿಗೆ ಪೆರುಗಿಯಾ ನಗರದ ಆಗ್ನೇಯಕ್ಕೆ ಭೂಮಿ ಕಂಪಿಸಿದ್ದು, ಮೊದಲ ಕಂಪನ ರಿಕ್ಟರ್ ಮಾಪಕದಲ್ಲಿ 6.2 ರಷ್ಟಿತ್ತು. ಬಳಿಕ ಅನೇಕ ಬಾರಿ ಕಂಪನ ಮುಂದುವರೆಯಿತು ಎಂದು ಮಾಹಿತಿ ಲಭಿಸಿದೆ.
ಕಟ್ಟಡಗಳ ಅಡಿಯಲ್ಲಿ ಹಲವರು ಸಿಕ್ಕಿ ಹಾಕಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದು ಸಾವು ನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ.
ಭೂಕಂಪದಿಂದಾಗಿ ಪೆರುಗಿಯಾ ನಗರ ಅರ್ಧದಷ್ಟು ನೆಲಸಮವಾಗಿದೆ ಎಂದು ರೋಮ್ ಮೇಯರ್ ಸೆರಿಗೋ ಪಿರಿಜ್ಜಿ ಮಾಹಿತಿ ನೀಡಿದ್ದಾರೆ.
ಕೆಲವು ಕಟ್ಟಡಗಳು 20 ಸೆಕೆಂಡ್ ಅಲ್ಲಾಡಿದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2009ರಲ್ಲಿ ಅಕ್ವಿಲಾ ಪ್ರದೇಶದಲ್ಲಿ ರಿಕ್ಟರ್ ಮಾಪಕ 6.3 ತೀವ್ರತೆಯಲ್ಲಿ ಕಂಪನ ದಾಖಲಾಗಿತ್ತು. ಆ ಸಂದರ್ಭದಲ್ಲಿ 300ಕ್ಕೂ ಹೆಚ್ಚು ಜನರು ದುರ್ಮರವನ್ನಪ್ಪಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.