ತನ್ನ ಮಾತು ಕೇಳದ ಇಸ್ರೇಲ್, ಇರಾನ್ ಗೆ ಈ ಆಕ್ಷೇಪಾರ್ಹ ಪದ ಬಳಸಿದ ಡೊನಾಲ್ಡ್ ಟ್ರಂಪ್

Krishnaveni K
ಬುಧವಾರ, 25 ಜೂನ್ 2025 (09:02 IST)
ನ್ಯೂಯಾರ್ಕ್: ಕದನ ವಿರಾಮ ಎಂದು ಘೋಷಿಸಿದ ಬಳಿಕವೂ ಯುದ್ಧ ಮುಂದುವರಿಸಿದ ಇಸ್ರೇಲ್ ಮತ್ತು ಇರಾನ್ ಮೇಲೆ ಸಿಟ್ಟಿಗೆದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಕ್ಷೇಪಾರ್ಹ ಪದವೊಂದನ್ನು ಬಳಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದಲ್ಲಿ ಇಸ್ರೇಲ್ ಜೊತೆ ಅಮೆರಿಕಾ ಕೂಡಾ ಕೈ ಜೋಡಿಸಿತ್ತು. ಇರಾನ್ ನ ನ್ಯೂಕ್ಲಿಯರ್ ಸ್ಥಾವರಗಳ ಮೇಲೆ ದಾಳಿ ನಡೆಸಿತ್ತು. ಇದಾದ ಬಳಿಕ ನಿನ್ನೆ ಟ್ರಂಪ್ ಕದನ ವಿರಾಮವಾಗಿದೆ ಎಂದು ಘೋಷಿಸಿದ್ದರು. ಆದರೆ ಇದನ್ನು ಇರಾನ್ ಒಪ್ಪಿರಲಿಲ್ಲ.

ಎರಡೂ ದೇಶಗಳೂ ಕದನ ವಿರಾಮ ಘೋಷಣೆಯಾದ ಬಳಿಕವೂ ಪರಸ್ಪರ ದಾಳಿ ಮುಂದುವರಿಸಿತ್ತು. ಹೀಗಾಗಿ ಟ್ರಂಪ್ ಸಿಟ್ಟಿಗೆದ್ದಿದ್ದರು. ಇದೇ ಸಿಟ್ಟಿನ ಭರದಲ್ಲಿ ಅವರು ಫ.. ಎಂದು ಆರಂಭವಾಗುವ ಆಕ್ಷೇಪಾರ್ಹ ಪದ ಬಳಸಿ ಅವರು ಏನು ಮಾಡುತ್ತಿದ್ದಾರೆಂದೇ ನನಗೆ ತಿಳಿಯುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದರು. ತನ್ನ ಮಾತು ಕೇಳದ ಉಭಯ ದೇಶಗಳ ಮೇಲೆ ಟ್ರಂಪ್ ಸಿಟ್ಟು ಮಾಡಿಕೊಂಡಿದ್ದಾರೆ.

ಇನ್ನು ಕದನ ವಿರಾಮದ ಹೊರತಾಗಿಯೂ ಇರಾನ್ ದಾಳಿಗೆ ಸಿದ್ಧತೆ ಮಾಡಿದ್ದು ಇದು ಕದನ ವಿರಾಮದ ಉಲ್ಲಂಘನೆಯಾಗಿದೆ. ಹೀಗಾಗಿ ನಾವೂ ಪ್ರತಿ ದಾಳಿಗೆ ಸಿದ್ಧರಾಗಿದ್ದೇವೆ ಎಂದು ಇಸ್ರೇಲ್ ಹೇಳಿತ್ತು. ಆದರೆ ಇದನ್ನು ಇರಾನ್ ನಿರಾಕರಿಸಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕ್ಯಾಬಿನ್ ಸಿಬ್ಬಂದಿ ಮೇಲೆ ಲೈಂಗಿಕ ದೌರ್ಜನ್ಯ, ಪೈಲಟ್ ವಿರುದ್ಧ ಪ್ರಕರಣ ದಾಖಲು

ದಕ್ಷಿಣ ಕನ್ನಡ ಜಿಲ್ಲೆಗೆ ಶೀಘ್ರದಲ್ಲೇ ಆನೆ ಕಾರ್ಯಪಡೆ

ಕೇರಳದ ಈ ಜಿಲ್ಲೆಗಳಲ್ಲಿ ಮುಂದಿನ 5 ದಿನಗಳಲ್ಲಿ ಭಾರೀ ಮಳೆ

ಧರ್ಮಸ್ಥಳ ಬುರುಡೆ ಪ್ರಕರಣ ಪ್ರಮುಖ ಹಂತದಲ್ಲಿರುವಾಗ ಮಹತ್ವದ ಬೆಳವಣಿಗೆ

ದೇವರಿಗೆ ಬಿಟ್ಟಿದ್ದ ಗೋವಿನ ಕಾಲು ಕಡಿದ ಪಾಪಿಗಳು, ಕ್ರಮಕ್ಕೆ ಒತ್ತಾಯ

ಮುಂದಿನ ಸುದ್ದಿ
Show comments