Select Your Language

Notifications

webdunia
webdunia
webdunia
webdunia

ಡೊನಾಲ್ಡ್ ಟ್ರಂಪ್ ಸಿರಿಯಾ ಮೇಲೆ ದಾಳಿ ನಡೆಸಲು ಈ ಮಹಿಳೆ ಕಾರಣ..?

ಡೊನಾಲ್ಡ್ ಟ್ರಂಪ್ ಸಿರಿಯಾ ಮೇಲೆ ದಾಳಿ ನಡೆಸಲು ಈ ಮಹಿಳೆ ಕಾರಣ..?
ನ್ಯೂಯಾರ್ಕ್ , ಬುಧವಾರ, 12 ಏಪ್ರಿಲ್ 2017 (09:27 IST)
ಪ್ರತಿಯೊಬ್ಬ ಗಂಡಿನ ಯಶಸ್ಸಿನ ಹಿಂದೆ ಒಂದು ಹೆಣ್ಣಿರುತ್ತಾಳೆ ಎಂಬ ಮಾತನ್ನ ಕೇಳೇ ಇರುತ್ತೀರಿ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಾರ್ಯಗಳ ಹಿಂದೆಯೂ ಒಬ್ಬ ಹೆಣ್ಣಿದ್ದಾಳೆ. ಸಿರಿಯಾ ಮೇಲೆ ಇತ್ತೀಚೆಗೆ ಅಮೆರಿಕ ನಡೆಸಿದ ಕ್ಷಿಪಣಿ ದಾಳಿ ಹಿಂದೆಯೂ ಒಂದು ಹೆಣ್ಣಿನ ಉತ್ತೇಜನ ಇತ್ತು ಎಂಬುದು ಈಗ ಬಹಿರಂಗವಾಗಿದೆ. ಅದು ಬೇರಾರೂ ಅಲ್ಲ, ಅವರ ಪುತ್ರಿ ಇವಾಂಕಾ.
ನನ್ನ ತಂದೆ ನನ್ನ ಸಹೋದರಿ ಇವಾಂಕಾ ಪ್ರತಿಕ್ರಿಯೆಯಿಂದ ಪ್ರಭಾವಿತನಾಗಿ ಈ ದಾಳಿ ನಡೆಸಿದ್ದಾರೆ ಎಂದು ಡೊನಾಲ್ಡ್ ಟ್ರಂಪ್ ಪುತ್ರ ಎರಿಕ್ ಹೇಳಿದ್ದಾರೆ.


ಟೆಲಿಗ್ರಾಫ್ ಸಂದರ್ಶನದಲ್ಲಿ ಮಾತನಾಡಿರುವ ಎರಿಕ್, ನನ್ನ ಸಹೋದರಿ ಮತ್ತು ಪಶ್ಚಿಮ ವಲಯದ ಸಲಹೆಗಾರರಾಗಿ ನೇಮಕವಾಗಿರುವ ಇವಾಂಕಾಳೆ ಸಿರಿಯಾ ಮೇಲೆ ದಾಳಿಗೆ ಪ್ರಚೋದನೆ ನೀಡಿದ್ದಳು. ಸಿರಿಯಾದಲ್ಲಿ ನಡೆದ ರಾಸಾಯನಿಕ ದಾಳಿಯಿಂದ 80ಕ್ಕೂ ಅಧಿಕ ಮಕ್ಕಳು, ಮಹಿಳೆಯರ ಸಾವು ನೋವನ್ನ ನೋಡಿ ಬೆಚ್ಚಿಬಿದ್ದಿದ್ದ ಇವಾಂಕಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಳು. ನನ್ನ ತಂದೆ ಇವರನ್ನ ಸುಮ್ಮನೆ ಬಿಡುವುದಿಲ್ಲ ಎಂದು ಹೇಳಿದ್ದಳು ಎಂದು ಎರಿಕ್ ಹೇಳಿದ್ದಾರೆ.

ಸಿರಿಯಾ ಮೇಲಿನ ದಾಳಿಗೂ ಮುನ್ನಾದಿನ ಸಿರಿಯಾ ದಾಳಿಯ ಭೀಕರ ಫೋಟೋಗಳನ್ನ ಟ್ವಿಟ್ ಮಾಡಿದ್ದ ಇವಾಂಕಾ, ತೀವ್ರ  ಆಕ್ರೋಶ ವ್ಯಕ್ತಪಡಿಸಿದ್ದನ್ನ ಇಲ್ಲಿ ಸ್ಮರಿಸಬಹುದು.

ಟಸಿರಿಯಾ ಮೇಲಿನ ಅಮೆರಿಕ ದಾಳಿಯಲ್ಲಿ ಇವಾಂಕಾ ಪ್ರಚೋದನೆ ಇತ್ತೆಂಬ ಪುತ್ರಿ ಎರಿಕ್ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿರುವ ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಸೀನ್ ಸ್ಪೈಸರ್, ಇದರಲ್ಲಿ ಇವಾಂಕಾ ಅಥವಾ ಬೇರಾವುದೇ ಪ್ರಭಾವದ ಪ್ರಶ್ನೆ ಇಲ್ಲ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗೋವಾ ಬೀಚ್ ನಲ್ಲಿ ಇನ್ನು ಪಾರ್ಟಿ ಮಾಡುವಂತಿಲ್ಲ!