Select Your Language

Notifications

webdunia
webdunia
webdunia
webdunia

ಟ್ರಂಪ್, ಒಬಾಮಾ ತೊಂಬತ್ತು ನಿಮಿಷ ಏನ್ ಚರ್ಚಿಸಿದ್ರು...?

ಟ್ರಂಪ್, ಒಬಾಮಾ ತೊಂಬತ್ತು ನಿಮಿಷ ಏನ್ ಚರ್ಚಿಸಿದ್ರು...?
ವಾಷಿಂಗ್ಟನ್ , ಮಂಗಳವಾರ, 15 ನವೆಂಬರ್ 2016 (09:36 IST)
ವಾಷಿಂಗ್ಟನ್: ಚುನಾವಣೆಯ ಬಳಿಕ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಹಾಗೂ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೊದಲ ಬಾರಿಗೆ ಭೇಟಿಯಾಗಿ ಬರೊಬ್ಬರಿ ಒಂಬತ್ತು ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ.
ಶ್ವೇತಭವನದ ಓವಲ್ ಕಚೇರಿಯಲ್ಲಿ ಪರಸ್ಪರ ಚರ್ಚಿಸಿದ ಇಬ್ಬರು, ಸಾಕಷ್ಟು ವಿಷಯಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ. ರಾಜಕೀಯದ ಅನನುಭವಿಯಾದ ಟ್ರಂಪ್ ಆಡಳಿತದಕ್ಕೆ ಅಗತ್ಯವಾದ ಮಾಹಿತಿಯನ್ನು ಇಬಾಮಾ ಅವರಿಂದ ಪಡೆದುದಲ್ಲದೆ, ಅಗತ್ಯ ಸಮಯದಲ್ಲಿ ಸಲಹೆ, ಸಾಉಚನೆ, ಮಾರ್ಗದರ್ಶನಗಳನ್ನು ಸಹ ನೀಡುತ್ತ ಇರಬೇಕೆಂದು ವಿನಂತಿಸಿಕೊಂಡಿದ್ದಾರೆ ಎನ್ನಲಾಗಿದೆ.
 
ರಾಜಕೀಯ ವಿರೋಧಿಗಳಾಗಿರುವ ಅವರಿಬ್ಬರ ಮಾತುಕತೆ  ಕೇವಲ 15 ನಿಮಿಷಗಳಿಗೆ ನಿಗದಿಯಾಗಿತ್ತು. ಆದರೆ ಸಭೆ 90 ನಿಮಿಷಗಳವರೆಗೂ ಮುಂದುವರೆಯಿತು. ಇತ್ತೀಚೇಗಷ್ಟೇ  ಮುಗಿದ ಚುನಾವಣೆಯಲ್ಲಿ ಟ್ರಂಪ್ ಹಾಗೂ ಒಬಾಮಾ ಪರಸ್ಪರರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಎರಡೂ ಪಕ್ಷದ ಮುಖಂಡರು ಪರಸ್ಪರ ಎದುರಾಗಿ ಮಾತುಕತೆ ನಡೆಸಿದ್ದು, ಟ್ರಂಪ್ ವಿರೋಧಿಗಳ ಬಾಯಿಮುಚ್ಚಿಸಲು ಯಶಸ್ವಿಯಾಗಲಿದೆ ಎನ್ನಲಾಗುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

ರೆಡ್ಡಿ ಮಗಳ ಮದುವೆಗೆ ಹೋಗ್ಬೇಡಿ ಎಂದ ಬಿಜೆಪಿ ಹೈಕಮಾಂಡ್?