Select Your Language

Notifications

webdunia
webdunia
webdunia
webdunia

ನಾಯಿಗೆ ಮರಣದಂಡನೆ ವಿಧಿಸಿದ ಪಾಕಿಸ್ತಾನ

ನಾಯಿಗೆ ಮರಣದಂಡನೆ ವಿಧಿಸಿದ ಪಾಕಿಸ್ತಾನ
ಲಾಹೋರ್ , ಬುಧವಾರ, 17 ಮೇ 2017 (19:49 IST)
ಒಂದು ವಿಲಕ್ಷಣ ಪ್ರಕರಣದಲ್ಲಿ, ಬಾಲಕನನ್ನು ಕಚ್ಚಿದ್ದಕ್ಕಾಗಿ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಾಯಿಗೆ ಮರಣದಂಡನೆ ವಿಧಿಸಲಾಗಿದೆ.
 
ಪಂಜಾಬ್ ಪ್ರಾಂತ್ಯದ ಭಕ್ಕರ್ಸ್ ಕ್ಲೋರ್ ಪ್ರಾಂತ್ಯದ ಸಹಾಯಕ ಆಯುಕ್ತ ರಾಜ ಸಲೀಂ ಅವರು ನಾಯಿಗೆ ಮರಣದಂಡನೆ ವಿಧಿಸಿದ್ದಾರೆ ಎಂದು ಜಿಯೋ ಟಿವಿ ವರದಿ ಮಾಡಿದೆ.
 
ಸಹಾಯಕ ಕಮಿಷನರ್ ಸಲೀಮ್ ತೀರ್ಪು ನೀಡುವ ಸಂದರ್ಭದಲ್ಲಿ "ಆ ನಾಯಿ ಮಗುವನ್ನು ಗಾಯಗೊಳಿಸಿದೆ, ಆದ್ದರಿಂದ, ಅದನ್ನು ಕೊಲ್ಲಬೇಕು" ಎಂದು ಘೋಷಿಸಿ ವಿಶಿಷ್ಟ ಮತ್ತು ವಿಲಕ್ಷಣವಾದ ವಾದವನ್ನು ಮಂಡಿಸಿದರು.
 
ನಾಯಿಯ ಮಾಲೀಕರು ವಿಪರೀತ ಶಿಕ್ಷೆಯ ವಿರುದ್ಧ ಹೆಚ್ಚುವರಿ ಉಪ ಕಮೀಷನರ್‌ಗೆ ಮೇಲ್ಮನವಿಯನ್ನು ಸಲ್ಲಿಸಿದ್ದಾರೆ "ಬಾಧಿತ ಮಗುವಿನ ಕುಟುಂಬವು ನನ್ನ ನಾಯಿಯ ವಿರುದ್ಧ ಪ್ರಕರಣ ದಾಖಲಿಸಿದೆ, ಅದರಿಂದಾಗಿ ನಾಯಿ ಒಂದು ವಾರ ಜೈಲು ಶಿಕ್ಷೆಯನ್ನು ಪೂರ್ಣಗೊಳಿಸಿದೆ. ಇದೀಗ ನೀಡುವ ಯಾವುದೇ ಶಿಕ್ಷೆ ಅನ್ಯಾಯವಾಗುತ್ತದೆ ಎಂದು ನಾಯಿ ಮಾಲೀಕರು ಅಸಮಾಧಾನ ವ್ಯಕ್ತಪಡಿಸಿದ್ದಾಗಿ ಮೂಲಗಳು ತಿಳಿಸಿವೆ. 
 
ತನ್ನ ಸಾಕುಪ್ರಾಣಿಗಾಗಿ ನ್ಯಾಯ ಪಡೆಯಲು ಎಲ್ಲಾ ನ್ಯಾಯಾಲಯಗಳ ಬಾಗಿಲನ್ನು ತಟ್ಟುತ್ತೇನೆ ಎಂದು ನಾಯಿಯ ಮಾಲೀಕ ಜಮಿಲ್ ಗುಡುಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ವಿವಾಹ ಮಂಟಪದಲ್ಲಿ ವರನಿಗೆ ರಿವಾಲ್ವರ್‌ನಿಂದ ಬೆದರಿಸಿ ಅಪಹರಿಸಿದ ಯುವತಿ