Select Your Language

Notifications

webdunia
webdunia
webdunia
webdunia

18 ವರ್ಷಗಳ ನಂತ್ರ ವ್ಯಕ್ತಿಯೊಬ್ಬನ ಹೊಟ್ಟೆಯಿಂದ ಕತ್ತರಿ ಹೊರತೆಗೆದ ವೈದ್ಯರು

18 ವರ್ಷಗಳ ನಂತ್ರ ವ್ಯಕ್ತಿಯೊಬ್ಬನ ಹೊಟ್ಟೆಯಿಂದ ಕತ್ತರಿ ಹೊರತೆಗೆದ ವೈದ್ಯರು
ಹನೋಯಿ , ಬುಧವಾರ, 4 ಜನವರಿ 2017 (14:00 IST)
ಕಳೆದ 18 ವರ್ಷಗಳಿಂದ ವ್ಯಕ್ತಿಯೊಬ್ಬನ ಹೊಟ್ಟೆಯಲ್ಲಿದ್ದ ಕತ್ತರಿಯನ್ನು ವೈದ್ಯರು ಯಶಸ್ವಿ ಚಿಕಿತ್ಸೆ ನಡೆಸಿ ತೆಗೆದುಹಾಕಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
 
ಕಳೆದ ಡಿಸೆಂಬರ್‌ನರೆಗೆ ವ್ಯಕ್ತಿಗೆ ತನ್ನ ಹೊಟ್ಟೆಯಲ್ಲಿ ಕತ್ತರಿಯಿದೇ ಎನ್ನುವುದೇ ತಿಳಿದಿರಲಿಲ್ಲ. ಆತನಿಗೆ ರಸ್ತೆ ಅಪಘಾತ ಸಂಭವಿಸಿದಾಗ ವೈದ್ಯರು ಎಕ್ಸ್‌-ರೇ ತೆಗೆದಾಗ ಆತನ ಹೊಟ್ಟೆಯಲ್ಲಿ ಕತ್ತರಿಯಿರುವುದು ಕಂಡು ಬಂದಿದೆ.  
 
ಉತ್ತರ ವಿಯಟ್ನಾಂನ ನುಗುವಾಯಾನ್ ಥಾಯಿ ಆಸ್ಪತ್ರೆಯಲ್ಲಿ ವ್ಯಕ್ತಿಗೆ ಮೂರು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು 15 ಸೆಂಟಿಮೀಟರ್ ಉದ್ದದ ಕತ್ತರಿಯನ್ನು ಹೊರತೆಗೆದಿದ್ದಾರೆ. 
 
ಕಳೆದ 1998 ರಲ್ಲಿ ಬಾಕ್ ಕಾನ್ ಜನರಲ್ ಆಸ್ಪತ್ರೆಯಲ್ಲಿ ಆಪರೇಶನ್‌ಗೆ ಒಳಗಾಗಿದ್ದಾಗ ಕತ್ತರಿ ಆತನ ಹೊಟ್ಟೆಯಲ್ಲಿಯೇ ಉಳಿದಿತ್ತು. 54 ವರ್ಷದ ವ್ಯಕ್ತಿಗೆ ಹೊಟ್ಟೆಯಲ್ಲಿರುವ ಕತ್ತರಿಯಿಂದ ಯಾವುದೇ ನೋವು ಅನುಭವಿಸಿರಲಿಲ್ಲವಂತೆ. ಘಟನೆಯ ಬಗ್ಗೆ ಆರೋಗ್ಯ ಸಚಿವಾಲಯ ತನಿಖೆಗೆ ಆದೇಶ ನೀಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಲೈಂಗಿಕ ದೌರ್ಜನ್ಯ ಪ್ರಕರಣ: ಪರಮೇಶ್ವರ್, ಅಬು ಅಜ್ಮಿಗೆ ನೋಟಿಸ್ ಜಾರಿ