ಬಿಕಿನಿ ತೊಟ್ಟು ಏಕಾಂಗಿಯಾಗಿ ಎತ್ತರದ ಪರ್ವತ ಏರಿದ ಮಹಿಳೆಗೆ ಆಮೇಲೆ ಆಗಿದ್ದೇನು ಗೊತ್ತಾ?

Webdunia
ಬುಧವಾರ, 23 ಜನವರಿ 2019 (09:14 IST)
ತೈವಾನ್ : ಬಿಕಿನಿ ತೊಟ್ಟು ಎತ್ತರದ ಪರ್ವತ ಏರಿದ ಮಹಿಳೆಯೊಬ್ಬಳು ಚಳಿಯಿಂದ ಆಯತಪ್ಪಿ ಪ್ರಪಾತಕ್ಕೆ ಬಿದ್ದು ಸಾವನಪ್ಪಿದ ಘಟನೆ ತೈವಾನ್ ನ ಯುಶನ್ ಮೌಂಟೇನ್ ನಲ್ಲಿ ಘಟನೆ ನಡೆದಿದೆ.


ಗಿಗಿ ವು(36 ವರ್ಷ) ಮೃತಪಟ್ಟ ಮಹಿಳೆಯಾಗಿದ್ದು, ಬಿಕಿನಿ ಹೈಕರ್ ಎಂದೇ ಜನಪ್ರಿಯಳಾಗಿದ್ದ ಈಕೆ ಕೇವಲ ಒಳ ಉಡುಪುಗಳಲ್ಲೇ ಏಕಾಂಗಿಯಾಗಿ ಅನೇಕ ಶಿಖರಾಗ್ರಗಳು ಮತ್ತು ಉತ್ತುಂಗ ಪರ್ವತಗಳನ್ನು ಏರುತ್ತಿದ್ದಳಂತೆ.


ಆದರೆ ತೈವಾನ್ ಹೃದಯ ಭಾಗದಲ್ಲಿರುವ ನನ್‍ಟಾವೋ ಕೌಂಟಿಯಲ್ಲಿನ ದೇಶದ ಅತಿ ಎತ್ತರದ ಯುಶಾನ್ (ಜೇಡ್ ಮೌಂಟೇನ್) ಪರ್ವತ ಏರಲು ಜ.11ರಂದು  ತೆರಳಿದ್ದಾರೆ. ಈ ಪರ್ವತ 12,966 ಅಡಿಗಳಷ್ಟು ಎತ್ತರದಲ್ಲಿದೆ. ಈಕೆ ಏಕಾಂಗಿಯಾಗಿ ಪರ್ವತ ಏರುವಾಗ ಆಯ ತಪ್ಪಿ ಪ್ರಪಾತಕ್ಕೆ ಉರುಳಿ ಬಿದ್ದಿದ್ದಾಳೆ.


ನಂತರ ಆಕೆ ಸ್ನೇಹಿತನಿಗೆ ಕರೆ ಮಾಡಿ ಕಂದಕದಲ್ಲಿ ಬಿದ್ದಿದ್ದೇನೆ. ಗಾಯವಾದ ಕಾರಣ ಏಳಲು ಆಗ್ತಿಲ್ಲ ಎಂದು ಮಾಹಿತಿ ನೀಡಿದ್ದಾಳಂತೆ. ಆದರೆ ಪ್ರತಿಕೂಲ ಹವಾಮಾನದಿಂದಾಗಿ ರಕ್ಷಣಾ ಕಾರ್ಯಕರ್ತರು ಸರಿಯಾದ ಸಮಯಕ್ಕೆ ಅಲ್ಲಿಗೆ ತಲುಪಲು ಸಾಧ್ಯವಾಗಿಲಿಲ್ಲ ನಂತರ ಬ್ಲಾಕ್ ಹಾಕ್ ಹೆಲಿಕಾಫ್ಟರ್‍ ಗಳು ತೀವ್ರ ಶೋಧ ನಡೆಸಿದ ನಂತರ ಹಿಮ ಕಂದಕವೊಂದರಲ್ಲಿ ಆಕೆಯ ಮೃತದೇಹ ಪತ್ತೆಯಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮೊಬೈಲ್‌ನಲ್ಲಿ ಸಂಚಾರ ಸಾಥಿ ಆ್ಯಪ್‌ ಇನ್‌ಸ್ಟಾಲ್‌: ವಿವಾದ ಬೆನ್ನಲ್ಲೇ ಯೂಟರ್ನ್‌ ಹೊಡೆದ ಕೇಂದ್ರ ಸರ್ಕಾರ

ಸೂರಜ್‌ ಬೆನ್ನಲ್ಲೇ ಪ್ರಜ್ವಲ್ ರೇವಣ್ಣಗೂ ಬಿಗ್‌ಶಾಕ್: ಶಿಕ್ಷೆ ಅಮಾನತು ಕೋರಿ ಸಲ್ಲಿಸಿದ್ದ ಅರ್ಜಿ ವಜಾ

ರಷ್ಯಾ ಅಧ್ಯಕ್ಷ ಪುಟಿನ್ ಭೇಟಿಗೆ ಬಂದೋಬಸ್ತ್ ನಡುವೆ ದೆಹಲಿಯ ಎರಡು ಕಾಲೇಜಿಗೆ ಬಾಂಬ್ ಬೆದರಿಕೆ

ಭಿನ್ನಾಭಿಪ್ರಾಯ ಬಗೆಹರಿದಿದೆ: ಸಿಎಂ ಕುರ್ಚಿ ಗುದ್ದಾಟಕ್ಕೆ ಪರಮೇಶ್ವರ್ ಪ್ರತಿಕ್ರಿಯೆ

ಯಾವತ್ತಾದ್ರೂ ಬಿಟ್ಟು ಕೊಡಲೇ ಬೇಕಾಲ್ವ, ಸಿಎಂ ಆಪ್ತ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ

ಮುಂದಿನ ಸುದ್ದಿ
Show comments