Select Your Language

Notifications

webdunia
webdunia
webdunia
webdunia

ನರೇಂದ್ರ ಮೋದಿ ಯಾರು ಗೊತ್ತೆ? ಅಚ್ಛರಿಯಾಗುತ್ತೆ ವಿದೇಶಿಯರು ನೀಡಿದ ಉತ್ತರ..

ನರೇಂದ್ರ ಮೋದಿ ಯಾರು ಗೊತ್ತೆ? ಅಚ್ಛರಿಯಾಗುತ್ತೆ ವಿದೇಶಿಯರು ನೀಡಿದ ಉತ್ತರ..
ನವದೆಹಲಿ , ಸೋಮವಾರ, 29 ಮೇ 2017 (17:00 IST)
ನವದೆಹಲಿ:ಪ್ರಧಾನಿ ನರೇಂದ್ರ ಮೋದಿಯವರು ದಿನಕಳೆದಂತೆಲ್ಲ ವಿಶ್ವದ ಪ್ರಭಾವಿ ನಾಯಕರಲ್ಲಿ ಒಬ್ಬರಾಗುತ್ತಿದ್ದಾರೆ. ಹೀಗಿರುವಾಗ ರಿಕ್ಷಾವಾಲಿ ಎಂಬ ಯೂಟ್ಯೂಬ್ ಖಾತೆದಾರರೊಬ್ಬರು ಮೋದಿ ಯಾರು ಎಂಬ ಪ್ರಶ್ನೆಗೆ ವಿದೇಶಿಯರು ನೀಡಿದ ಉತ್ತರ ನಮ್ಮನ್ನು ದಂಗುಬಡಿಸುತ್ತದೆ.
 
ಖ್ಯಾತ ವಿಡಿಯೋ ಜಾಲತಾಣ ಯೂ ಟ್ಯೂಬ್'ನಲ್ಲಿ ತನ್ನದೇ ಛಾಪು ಮೂಡಿಸಿರುವ  'ರಿಕ್ಷಾವಾಲಿ' ಖಾತೆ ಸ್ಪೇನ್'ನ ಇಬೀಸಾ ದ್ವೀಪಕ್ಕೆ ತೆರಳಿ ಅಲ್ಲಿನ  ನಾಗರಿಕರ ಬಳಿ ಮೋದಿಯ ಚಿತ್ರ ತೋರಿಸಿ ಗುರುತಿಸಲು ಹೇಳಿದ್ದಾರೆ. ಈ ವೇಳೆ ಹಲವು ಮಂದಿ ಮೋದಿಯನ್ನು ಗುರುತಿಸುವಲ್ಲಿ ಯಸ್ವಿಯಾಗಿದ್ದಾರೆ. ಇನ್ನು ಹಲವರು ಅಚ್ಚರಿಯ ಉತ್ತರಗಳನ್ನು ನೀಡಿದ್ದಾರೆ. ಇದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
 
ಹಾಗಾದರೆ ಅವರು ನೀಡಿರುವ ಉತ್ತರದಲ್ಲಿ ಏನಿದೆ ನೀವೆ ಓದಿ.. ಕೆಲವರು ನರೇಂದ್ರ ಮೋದಿ ಅವರನ್ನು ವಿಶ್ವದ ಅತ್ಯಂತ ಪ್ರಭಾವಿ ನಾಯಕ ಎಂದರೆ, ಮತ್ತೆ ಕೆಲವರು ಮೋದಿ ಅವರನ್ನು ಗಾಂಧಿ ಎಂದು ಗುರುತಿಸಿದ್ದಾರೆ. ಓರ್ವ ಮಹಿಳೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅವರು ಯೋಗ  ಗುರುಗಳು, ಪ್ರತಿನಿತ್ಯ ನಾನು ಅವರೊಂದಿಗೆ ಯೋಗ ಮಾಡುತ್ತೇನೆ ಎಂದು ಹೇಳಿದ್ದಾರೆ. ಓರ್ವ ಯುವಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒಂದೇ ಕೈಯಲ್ಲಿ ಪುಶ್ ಅಪ್ಸ್ ಮಾಡುವ ಯೋಗಗುರು ಎಂದು ಹೇಳಿದ್ದಾನೆ. ಅಂತೆಯೇ  ಮತ್ತೋರ್ವ ಪ್ರಧಾನಿ ನರೇಂದ್ರ ಮೋದಿ ವಿಶ್ವದ ಅತ್ಯಂತ ಪ್ರಭಾವಿ ನಾಯಕರಾಗಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರನ್ನು ಒಂದೇ ಕೈಯಲ್ಲಿ ಮಣ್ಣುಮುಕ್ಕಿಸುವ ಮತ್ತು ಅವರನ್ನು ಅಧಿಕಾರದಿಂದ ಕೆಳಗಿಳಿಸುವ ತಾಕತ್ತು  ಹೊಂದಿದ್ದಾರೆ. ಆ ಮೂಲಕ ಅಮೆರಿಕವನ್ನು ಸ್ವಚ್ಛಗೊಳಿಸಲಿದ್ದಾರೆ ಎಂದು ಹೇಳಿದ್ದಾನೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಮುಂದುವರಿಕೆಗೆ ಹೈಕಮಾಂಡ್ ಇಂಗಿತ