Select Your Language

Notifications

webdunia
webdunia
webdunia
webdunia

ಬೈಡನ್ಗೆ ಕೊಲೆ ಬೆದರಿಕೆ ! ವ್ಯಕ್ತಿಯನ್ನು ಗುಂಡಿಕ್ಕಿ ಕೊಂದ ಎಫ್‌ಬಿಐ

ಬೈಡನ್ಗೆ ಕೊಲೆ ಬೆದರಿಕೆ ! ವ್ಯಕ್ತಿಯನ್ನು ಗುಂಡಿಕ್ಕಿ ಕೊಂದ ಎಫ್‌ಬಿಐ
ವಾಷಿಂಗ್ಟನ್ , ಗುರುವಾರ, 10 ಆಗಸ್ಟ್ 2023 (14:25 IST)
ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷ ಜೋ ಬೈಡನ್, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಸೇರಿದಂತೆ ಇತರ ಕೆಲವು ಅಧಿಕಾರಿಗಳಿಗೆ ಆನ್ಲೈನ್ ಮೂಲಕ ಕೊಲೆ ಬೆದರಿಕೆ ಒಡ್ಡಿದ್ದ ವ್ಯಕ್ತಿಯನ್ನು ಗುಂಡಿಕ್ಕಿ ಕೊಂದಿರುವುದಾಗಿ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ತಿಳಿಸಿದೆ.

ಬೈಡನ್ ಬುಧವಾರ ಉತಾಹ್ಗೆ ಭೇಟಿ ನಿಗದಿಯಾಗಿತ್ತು. ಈ ಭೇಟಿ ಹಿನ್ನೆಲೆ ಕ್ರೇಗ್ ರಾಬರ್ಟ್ಸನ್ ಎಂಬ ವ್ಯಕ್ತಿ ಆನ್ಲೈನ್ನಲ್ಲಿ ಬೈಡನ್ ಹಾಗೂ ಇತರ ಅಧಿಕಾರಿಗಳಿಗೆ ಕೊಲೆ ಬೆದರಿಕೆ ಹಾಕಿದ್ದ. ಆತನ ಪೋಸ್ಟ್ನಲ್ಲಿ ಬೈಡನ್ ಆಗಮಿಸುತ್ತಿರುವ ವಿಚಾರ ತಿಳಿದಿದೆ. ಎಂ24 ಸ್ನೈಪರ್ ರೈಫಲ್ ಅನ್ನು ಸಿದ್ಧಪಡಿಸಿಕೊಳ್ಳುತ್ತಿದ್ದೇನೆ ಎಂದು ಬರೆಯಲಾಗಿತ್ತು. ಇದಕ್ಕೆ ಸಂಬಂಧಪಟ್ಟಂತೆ ದೂರನ್ನು ದಾಖಲಿಸಲಾಗಿತ್ತು. 

ತಕ್ಷಣ ಎಚ್ಚೆತ್ತುಕೊಂಡ ಎಫ್ಬಿಐ ತಂಡ ಬುಧವಾರ ಮುಂಜಾನೆ ಸ್ಟಾಲ್ ಲೇಕ್ ಸಿಟಿಯ ದಕ್ಷಿಣದ ಪ್ರೊವೊದಲ್ಲಿನ ರಾಬರ್ಟ್ಸನ್ ಮನೆಗೆ ಬಂಧನದ ವಾರೆಂಟ್ ಜೊತೆ ಬಂದಿದ್ದಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಕೆಂಪು ಕೋಟೆ, ರಾಜ್‍ಘಾಟ್‍ನಲ್ಲಿ ಸೆಕ್ಷನ್ 144 ಜಾರಿ