Webdunia - Bharat's app for daily news and videos

Install App

ಕಾಲೇಜು ಕ್ಯಾಂಪಸ್‌ಗಳಲ್ಲಿ ಚುಂಬನ, ಆಲಿಂಗನ, ಅಶ್ಲೀಲ ನಡವಳಿಕೆಗೆ ಕಡಿವಾಣ

Webdunia
ಮಂಗಳವಾರ, 7 ನವೆಂಬರ್ 2023 (13:29 IST)
ವಿದ್ಯಾರ್ಥಿಗಳಲ್ಲಿ ನಾಗರಿಕ ಗುಣಗಳನ್ನು ಬೆಳೆಸಲು ಈ ಕಟ್ಟುಪಾಡುಗಳನ್ನು ವಿಧಿಸಲಾಗಿದೆ ಎಂದು ಶಿಕ್ಷಕರೊಬ್ಬರು ಹೇಳಿದರು.   ವಿಶ್ವವಿದ್ಯಾನಿಲಯದ ಕ್ಯಾಂಟೀನ್‌ನಲ್ಲಿ ವಿದ್ಯಾರ್ಥಿಗಳ ನಡವಳಿಕೆ ಕುರಿತು ಈ ನಿಯಮಗಳು ವಿಶೇಷ ಗಮನಹರಿಸಿದ್ದು, ಅಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಕೂಡ ಅಳವಡಿಸಲಾಗಿದೆ. 
 
ಚೀನಾದ ವಿಶ್ವವಿದ್ಯಾನಿಲಯವೊಂದು ವಿದ್ಯಾರ್ಥಿ ಪ್ರೇಮಿಗಳ  ಜೋಡಿಗೆ ಪರಸ್ಪರ ಕೈಹಿಡಿದುಕೊಳ್ಳಲು, ಭುಜದ ಮೇಲೆ ಪರಸ್ಪರ ಕೈಹಾಕುವುದಕ್ಕೆ ಮತ್ತು ಕ್ಯಾಂಟೀನ್‌ನಲ್ಲಿ ಪರಸ್ಪರ ಆಹಾರ ತಿನ್ನಿಸುವುದನ್ನು ನಿಷೇಧಿಸಿದೆ. ಹೊಸ ನಡವಳಿಕೆ ಸಂಹಿತೆಯನ್ನು ಛಾಂಗ್ಸಾ ನಗರದಲ್ಲಿ ಜಿಲಿನ್ ನಿರ್ಮಾಣ ವಿಶ್ವವಿದ್ಯಾನಿಲಯ ಬಿಡುಗಡೆ ಮಾಡಿದ್ದು, ವಿದ್ಯಾರ್ಥಿಗಳು ಮತ್ತು ಚೀನಾದ ಸಾಮಾಜಿಕ ಜಾಲತಾಣದ ಬಳಕೆದಾರರ ಅಪಹಾಸ್ಯಕ್ಕೆ ಗುರಿಯಾಗಿದೆ. 
 
ಪರಸ್ಪರ ಪ್ರೀತಿಸುವ ಜೋಡಿಯ ಜತೆ  ಖಾಸಗಿ ಸಂಭಾಷಣೆ ನಡೆಸಿ ದೈಹಿಕ ಸಂಪರ್ಕ ಹೊಂದದಂತೆ ಅಥವಾ ಕ್ಯಾಂಪಸ್‌ನಲ್ಲಿ ಅಸಹಜವಾಗಿ ವರ್ತಿಸದಂತೆ ಸೂಚಿಸಿದೆ. 
 
ಸಬ್ ವೇ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ  ಚುಂಬನ, ಆಲಿಂಗನ ಮುಂತಾದ ಅಶ್ಲೀಲ ನಡವಳಿಕೆಯನ್ನು ಮಾಧ್ಯಮ ಬಹಿರಂಗ ಮಾಡಿದೆ. ಕ್ಯಾಂಟೀನ್‌ನಲ್ಲಿ ಇಂತಹ ಬೆಳವಣಿಗೆ ಕಂಡುಬಂದರೆ ನಾವು ಸಹಿಸುವುದಿಲ್ಲ ಎಂದು ಶಿಕ್ಷಕರೊಬ್ಬರು ಹೇಳಿದರು. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments