ಗುಬ್ಬಿ, ಪಾರಿವಾಳ, ಮೈನಾ ಇಂತಹ ಹಕ್ಕಿಗಳನ್ನು ಹೆಚ್ಚಿನವರು ಇಷ್ಟಪಡುತ್ತಾರೆ. ಆದರೆ ಕಾಗೆ ಎಂದರೆ ಎಲ್ಲರಿಗೂ ಅಸಡ್ಡೆ. ಅದು ಮನೆ ಮುಂದೆ ಕುಳಿತು ಕಾ, ಕಾ ಎಂದು ಕೂಗುತ್ತಿದ್ದರೆ ಓಡಿ ಬಂದು ಓಡಿಸಿ ಬಿಡುತ್ತಾರೆ. ಆದರೆ ಕೆನಡಾದ ಕಾಗೆಯೊಂದು ಸೆಲಬ್ರಿಟಿ ಎನ್ನಿಸಿಕೊಂಡಿದೆ. ಅದು ಫೇಸ್‌ಬುಕ್ ಖಾತೆಯನ್ನು ಸಹ ಹೊಂದಿದ್ದು, ಅದಕ್ಕೆ 22 ಸಾವಿರ ಫೇಸ್‍ಬುಕ್ ಫಾಲೋವರ್ಸ್ ಇದ್ದಾರೆ.
ಕ್ಯಾನಕ್ ಎಂಬ ಹೆಸರಿನ ಈ ಕಾಗೆ ಹಲವು ಫೇಸ್‌ಬುಕ್ ವಿಡಿಯೋಗಳಲ್ಲಿ ಸಹ ಕಾಣಿಸಿಕೊಂಡಿದೆ.
ಕೆನಡಾ ಪೊಲೀಸರು ಇತ್ತೀಚಿಗೆ ಈ ಸೆಲಬ್ರಿಟಿ ಕಾಗೆ ಬೆನ್ನು ಹತ್ತಿದ್ದರು. ಕಾರಣ ಅದು ಚಾಕುವೊಂದನ್ನು ಕದ್ದು ಪರಾರಿಯಾಗಿತ್ತು. ಕೊನೆಗೂ ಅದನ್ನು ಬಂಧಿಸುವಲ್ಲಿ ಪೊಲೀಸರು ಯಶ ಕಂಡಿದ್ದಾರೆ. ಆದರೆ ಕಾಗೆಯ ಕಾಲಿನಲ್ಲಿ ಕಟ್ಟಲಾಗಿದ್ದ ಕೆಂಪು ಪ್ಲಾಸ್ಟಿಕ್ ಟೇಪ್ ನೋಡಿದಾಗ ಅದು ಖಾಸಗಿ ಚಾನೆಲ್‍ವೊಂದರಲ್ಲಿ ಬರುವ ಕ್ರೈಮ್ ಧಾರವಾಹಿಯ ಪಾತ್ರಧಾರಿಯೆಂದು ಪೊಲೀಸರಿಗೆ ಅರಿವಾಗಿದೆ. ಖಾಸಗಿ ವಾಹಿನಿಯೊಂದರಲ್ಲಿ ಅಪರಾಧ ಪತ್ತೆದಾರಿಗೆ ಸಹಾಯಕನಂತೆ ಈ ಕಾಗೆ ಕಾಣಿಸಿಕೊಳ್ಳುತ್ತದೆ. ಹೀಗಾಗಿ ಇದು ಸೆಲಬ್ರಿಟಿಯಾಗಿ ಹೆಸರುಗಳಿಸಿದೆ.
ಅತಿ ಬುದ್ಧಿವಂತ ಕ್ಯಾನಕ್ ಈ ಹಿಂದೆ ಕ್ಯಾಮೆರಾಮನ್ ಅವರ ಸನ್ ಗ್ಲಾಸ್‍ವೊಂದನ್ನು ಹೊತ್ತು ಪರಾರಿಯಾಗಿತ್ತಂತೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ
ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.