ಇಸ್ಲಾಮಾಬಾದ್ : ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ಗೆ ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಲು ಯಾವುದೇ ನಿರ್ಬಂಧವಿಲ್ಲ ಎಂದು ಸ್ಥಳೀಯ ಕೋರ್ಟ್ ಗ್ರೀನ್ಸಿಗ್ನಲ್ ನೀಡಿದೆ.
ಉಡುಗೊರೆ ದುರ್ಬಳಕೆ ಪ್ರಕರಣದಲ್ಲಿ ಇಮ್ರಾನ್ಖಾನ್ ಅವರನ್ನು ಮುಂದಿನ 5 ವರ್ಷ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಕಳೆದವಾರ ಚುನಾವಣಾ ಆಯೋಗ ಆದೇಶಿಸಿತ್ತು. ಇದನ್ನು ಇಮ್ರಾನ್ಖಾನ್ ಪ್ರಶ್ನಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಇಮ್ರಾನ್ಖಾನ್ ಚುನಾವಣೆಗೆ ಸ್ಪರ್ಧಿಸದಂತೆ ಆಯೋಗ ನಿರ್ಬಂಧ ಹೇರಿಲ್ಲ ಎಂದು ಹೇಳಿತು. ಆದ್ದರಿಂದಾಗಿ ಇದೇ ಅಕ್ಟೋಬರ್ 30 ರಂದು ನಡೆಯುವ ಖೈಬರ್ ಪಖ್ತೂನ್ಕ್ವಾ ಪ್ರಾಂತ್ಯದ ಖರ್ರಂ ಜಿಲ್ಲೆಯ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಖಾನ್ಗೆ ಅವಕಾಶವಿದೆ ಎಂದು ಹೇಳಿತು.