Publish Date: Wed, 11 Aug 2021 (15:00 IST)
Updated Date: Wed, 11 Aug 2021 (15:03 IST)
ಬರ್ನ್(ಆ.11): ಅಪರಾಧಿಯು ಕೇವಲ 11 ನಿಮಿಷ ರೇಪ್ ಮಾಡಿದ್ದಾನೆ. ಸಂತ್ರಸ್ತೆಗೆ ಹೆಚ್ಚಿನ ಗಾಯ ಕೂಡ ಮಾಡಿಲ್ಲ ಎಂಬ ಕಾರಣ ನೀಡಿ, ಅತ್ಯಾಚಾರಿಗೆ ವಿಧಿಸಿದ್ದ 4 ವರ್ಷದ ಶಿಕ್ಷೆಯನ್ನು 3 ವರ್ಷಕ್ಕೆ ಕಡಿಮೆ ಮಾಡಿ ಸ್ವಿಜರ್ಲೆಂಡ್ ಬೆಸಿಲ್ ನ್ಯಾಯಾಲಯದ ನ್ಯಾಯಾಧೀಶರೊಬ್ಬರು ತೀರ್ಪು ನೀಡಿದ್ದಾರೆ. ಇದು ವಿವಾದಕ್ಕೀಡಾಗಿದೆ.
ಕಳೆದ ವರ್ಷ ನೈಟ್ಕ್ಲಬ್ ಒಂದರಲ್ಲಿ 33 ವರ್ಷದ ವ್ಯಕ್ತಿ ಮತ್ತು 17 ವರ್ಷದ ಹುಡುಗ ಸೇರಿ ಮಹಿಳೆಯೊಬ್ಬಳ ಮೇಲೆ ಅತ್ಯಾಚಾರ ನಡೆಸಿದ್ದರು. ಹುಡುಗ ಬಾಲಾಪರಾಧಿಯಾದ ಕಾರಣ ಆತನ ವಿಚಾರಣೆ ಬಾಲಾಪರಾಧ ನ್ಯಾಯಾಲಯಲ್ಲಿ ನಡೆಯುತ್ತಿದೆ. ಮತ್ತೊಬ್ಬ ವ್ಯಕ್ತಿಯ ವಿಚಾರಣೆ ನಡೆಸಿರುವ ಬೆಸಿಲ್ ನ್ಯಾಯಾಲಯ ಆತ ಕೇವಲ 11 ನಿಮಿಷ ಮಾತ್ರ ಅತ್ಯಾಚಾರ ನಡೆಸಿದ್ದಾನೆ ಎನ್ನುವ ಕಾರಣ ನೀಡಿ ಶಿಕ್ಷೆಯ ಅವಧಿಯನ್ನು ಕಡಿಮೆ ಮಾಡಿದೆ. ನ್ಯಾಯಾಲಯದ ತೀರ್ಪು ಮಹಿಳೆಗೆ ಮಾಡಿದ ಅನ್ಯಾಯ ಎಂದು ನೂರಾರು ಮಹಿಳೆಯರು ನ್ಯಾಯಾಲಯದ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ