Webdunia - Bharat's app for daily news and videos

Install App

ವಿದ್ಯುತ್ ಗ್ರಿಡ್ ಹ್ಯಾಕ್‌ಗೆ ಚೀನಾ ಯತ್ನ?

Webdunia
ಶುಕ್ರವಾರ, 8 ಏಪ್ರಿಲ್ 2022 (10:27 IST)
ನವದೆಹಲಿ :  ಚೀನಾದವರು ಭಾರತದ ಮೇಲೆ ಕೇವಲ ಗಡಿ ತಂಟೆಯ ಮೂಲಕವಷ್ಟೇ ಅಲ್ಲ, ವಿದ್ಯುತ್ ಗ್ರಿಡ್ಗಳ ಮೇಲೂ ‘ದಾಳಿ’ ನಡೆಸಲು ಯತ್ನಿಸಿದ ವಿಚಾರ ಬೆಳಕಿಗೆ ಬಂದಿದೆ.
 
ಚೀನಾ ಗಡಿ ತಗಾದೆಯ ಪ್ರಮುಖ ಕೇಂದ್ರವಾಗಿರುವ ಗಡಿ ಪ್ರದೇಶ ಲಡಾಖ್ ಹಾಗೂ ಉತ್ತರ ಭಾರತದಲ್ಲಿನ 7 ಪವರ್ ಗ್ರಿಡ್ಗಳ ತಂತ್ರಾಂಶಕ್ಕೆ ಚೀನಿ ಹ್ಯಾಕರ್ಗಳು ಕನ್ನ ಹಾಕಿ, ವಿದ್ಯುತ್ ಪೂರೈಕೆ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಯತ್ನಿಸಿದ್ದಾರೆ. ಆದರೆ ಈ ಯತ್ನ ವಿಫಲವಾಗಿದೆ.

‘ರೆಕಾರ್ಡೆಡ್ ಫ್ಯೂಚರ್’ಎಂಬ ಖಾಸಗಿ ಗುಪ್ತಚರ ಸಂಸ್ಥೆ ಈ ವಿಷಯವನ್ನು ಸರ್ಕಾರದ ಗಮನಕ್ಕೆ ತಂದು ವರದಿ ಪ್ರಕಟಿಸಿದೆ. ಹ್ಯಾಕಿಂಗ್ ಯತ್ನ ನಡೆದಿದ್ದನ್ನು ಕೇಂದ್ರ ವಿದ್ಯುತ್ ಸಚಿವ ಆರ್.ಕೆ. ಸಿಂಗ್ ಕೂಡ ಖಚಿತಪಡಿಸಿದ್ದಾರೆ.

ಚೀನಾ ಸರ್ಕಾರಿ ಪ್ರಾಯೋಜಿತ ಹ್ಯಾಕರ್ಗಳು ಕಳೆದ ಆಗಸ್ಟ್ನಿಂದ ಈ ವರ್ಷದ ಮಾಚ್ರ್ವರೆಗೆ ಹ್ಯಾಕಿಂಗ್ಗೆ ಯತ್ನ ನಡೆಸಿದ್ದಾರೆ. ಭಾರತದ ವಿದ್ಯುತ್ ವಿತರಣಾ ಕೇಂದ್ರಗಳ ದತ್ತಾಂಶವು ಚೀನಾ ಪ್ರಾಯೋಜಿತ ಕಮಾಂಡ್ ಹಾಗೂ ಸರ್ವರ್ಗಳಿಗೆ ವರ್ಗ ಆಗುತ್ತಿತ್ತು.

ಭಾರತದ ಈ ಪ್ರಮುಖ ಮೂಲಸೌಕರ್ಯ ಘಟಕಗಳ ಮಾಹಿತಿಯನ್ನು ಕಳ್ಳತನದ ಮೂಲಕ ಸಂಗ್ರಹಿಸುವುದು ಚೀನಾ ಹ್ಯಾಕರ್ಗಳ ಉದ್ದೇಶವಾಗಿತ್ತು ಎಂದೂ ಗುಪ್ತಚರ ವರದಿ ತಿಳಿಸಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮುಂಬೈ-ಮ್ಯಾಂಚೆಸ್ಟರ್ ಮಾರ್ಗದಲ್ಲಿ ವಿಮಾನಯಾನ ಹೆಚ್ಚಿಸಿದ ಇಂಡಿಗೋ ಏರ್‌ಲೈನ್ಸ್‌

ಭಟ್ಕಳ: ಅಲೆಗಳ ಅಬ್ಬರಕ್ಕೆ ಮಗುಚಿದ ನಾಡದೋಣಿ, ನಾಲ್ವರು ಸಾವು

ನಾಸಾ-ಇಸ್ರೋ ನಿಸಾರ್ ಉಪಗ್ರಹ: ನಭಕ್ಕೆ ಚಿಮ್ಮಿದ ನಿಸಾರ್ ಮಾಡಲಿದೆ ಈ ಅಧ್ಯಯನ

ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಅಣ್ಣಾಮಲೈಗೆ ಮುಂದಿನ ಎಲೆಕ್ಷನ್‌ನಲ್ಲೂ ಟಿಕೆಟ್‌ ಡೌಟ್‌, ಕಾರಣ ಇಲ್ಲಿದೆ

ಧರ್ಮಸ್ಥಳ ಉತ್ಖನನ ವೇಳೆ ಕಂಡಿದ್ದೇನು: ಬಿಗ್ ಟ್ವಿಸ್ಟ್

ಮುಂದಿನ ಸುದ್ದಿ
Show comments