Publish Date: Thu, 25 Jun 2020 (11:11 IST)
Updated Date: Thu, 25 Jun 2020 (11:13 IST)
ನವದೆಹಲಿ: ಒಂದು ಕಡೆ ಮಾತುಕತೆ ಯಶಸ್ವಿ ಎನ್ನುತ್ತಲೇ ಇನ್ನೊಂದು ಕಡೆ ಗಡಿಯಲ್ಲಿ ಮತ್ತೆ ಚೀನಾ ತನ್ನ ಕಿತಾಪತಿ ಮಾಡಲು ಸೇನೆ ಜಮಾವಣೆ ಮಾಡುತ್ತಿದೆ.
ಜೂನ್ 15 ರಂದು ಭಾರತೀಯ ಯೋಧರೊಂದಿಗೆ ನಡೆದ ಸಂಘರ್ಷದ ಬಳಿಕ ಉಭಯ ದೇಶಗಳ ನಡುವೆ ಹಲವು ಸುತ್ತಿನ ಮಾತುಕತೆ ನಡೆದರೂ ಚೀನಾ ತನ್ನ ಹಳೆಯ ಚಾಳಿ ಬಿಟ್ಟಿಲ್ಲ.
ಇದೀಗ ಅರುಣಾಚಲಪ್ರದೇಶ, ಸಿಕ್ಕಿಂ ಮತ್ತು ಉತ್ತಾರಖಂಡದ ಗಡಿ ಭಾಗಗಳಲ್ಲಿ ಮತ್ತಷ್ಟು ಸೇನೆ ಜಮಾವಣೆ ಮಾಡಿರುವ ಚೀನಾ ಶಸ್ತ್ರಾಸ್ತ್ರಗಳನ್ನೂ ಸಂಗ್ರಹಿಸಿಕೊಟ್ಟಿದೆ ಎನ್ನಲಾಗಿದೆ.