Select Your Language

Notifications

webdunia
webdunia
webdunia
webdunia

ಜಿ-20 ಶೃಂಗಸಭೆ: ಪ್ರಧಾನಿ ಮೋದಿ, ಕ್ಸಿ ಜಿನ್ ಪಿಂಗ್ ದ್ವಿಪಕ್ಷೀಯ ಮಾತುಕತೆಗೆ ಇದು ಸೂಕ್ತ ಸಮಯವಲ್ಲ

ಜಿ-20 ಶೃಂಗಸಭೆ: ಪ್ರಧಾನಿ ಮೋದಿ, ಕ್ಸಿ ಜಿನ್ ಪಿಂಗ್ ದ್ವಿಪಕ್ಷೀಯ ಮಾತುಕತೆಗೆ ಇದು ಸೂಕ್ತ ಸಮಯವಲ್ಲ
ಬೀಜಿಂಗ್ , ಗುರುವಾರ, 6 ಜುಲೈ 2017 (17:14 IST)
ಬೀಜಿಂಗ್: ಜರ್ಮನಿಯ ಹ್ಯಾಂ ಬರ್ಗ್ ನಲ್ಲಿ ನಾಳೆಯಿಂದ ನಡೆಯಲಿರುವ ಜಿ-20 ಶೃಂಗ ಸಭೆ ವೇಳೆ ಭಾರತ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ್ಯ ಕ್ಸಿ ಜಿನ್ ಪಿಂಗ್ ಅವರು ದ್ವಿಪಕ್ಷೀಯ ಮಾತುಕತೆ ನಡೆಸಲು ಇದು ಸೂಕ್ತ ಸಮಯ ಅಲ್ಲ ಎಂದು ಚೀನಾ ಕಠಿಣ ಹೇಳಿಕೆ ನೀಡಿದೆ.
 
ಸಿಕ್ಕಿನ ಗಡಿಯಲ್ಲಿ ಭಾರತ ಹಾಗೂ ಚೀನಾ ಸೇನೆಗಳು ಮುಖಾಮುಖಿಯಾಗಿರುವ ಹಿನ್ನಲೆಯಲ್ಲಿ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ನಡುವೆ ಜಿ20 ದೇಶಗಳ ಶೃಂಗ ಸಭೆಯಲ್ಲಿ  ಉಭಯ ದೇಶಗಳ ನಾಯಕರು ಪಾಲ್ಗೊಳ್ಳುವರಾದರೂ ಅವರ ನಡುವೆ ದ್ವಿಪಕ್ಷೀಯ ಮಾತುಕತೆ ನಡೆಯದೆಂದು ಚೀನ ಖಡಕ್‌ ಆಗಿ ತಿಳಿಸಿದೆ. ಗಡಿ ಬಿಕ್ಕಟ್ಟು ನಿವಾರಣೆ ಸಂಬಂಧ ಯಾವುದೇ ಅರ್ಥಪೂರ್ಣ ಮಾತುಕತೆ ನಡೆಸುವುದಕ್ಕೆ ಮುನ್ನ ಭಾರತ ತನ್ನ ಸೇನೆಯನ್ನು ಹಿಂದೆಗೆದುಕೊಂಡು ಸಿಕ್ಕಿಂ ಗಡಿಯಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಬೇಕು ಎಂದು ಚೀನಾ ತಿಳಿಸಿತ್ತು.
 
ಇನ್ನು ಜಿ 20 ಶೃಂಗ ಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಇಂದು ಹ್ಯಾಮ್ ಬರ್ಗ್ ತಲುಪಲಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ವಿದ್ಯುತ್ ಹಗರಣ: ಯಾವುದೇ ತನಿಖೆಗೆ ಸಿದ್ದ ಎಂದ ಕುಮಾರಸ್ವಾಮಿ