Select Your Language

Notifications

webdunia
webdunia
webdunia
webdunia

ಕ್ಯಾಮರಾದಲ್ಲಿ ಸೆರೆ: ಶ್ರೀಲಂಕಾ ರಾಯಭಾರಿಗೆ ಒದೆತ, ಮುಷ್ಠಿಪ್ರಹಾರ

ಕ್ಯಾಮರಾದಲ್ಲಿ ಸೆರೆ:  ಶ್ರೀಲಂಕಾ ರಾಯಭಾರಿಗೆ ಒದೆತ, ಮುಷ್ಠಿಪ್ರಹಾರ
ಕೌಲಾಲಂಪುರ , ಮಂಗಳವಾರ, 6 ಸೆಪ್ಟಂಬರ್ 2016 (10:09 IST)
ಕೌಲಾಲಂಪುರ, ಮಲೇಶಿಯಾ:  ಕೌಲಾಲಂಪುರ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಶ್ರೀಲಂಕಾ ರಾಯಭಾರಿಯ ಮೇಲೆ ಪ್ರತಿಭಟನೆಕಾರರ ಐವರ ಗುಂಪು ಅಮಾನೀಯವಾಗಿ ಹಲ್ಲೆ ಮಾಡಿದ ಘಟನೆ ಸಂಭವಿಸಿದೆ. ಈ ಘಟನೆಗೆ ಸಂಬಂಧಿಸಿದಂತೆ ಮಲೇಶಿಯಾ ಪೊಲೀಸರು ಐವರನ್ನು ಬಂಧಿಸಿದ್ದಾರೆ.

ಹೈಕಮೀಷನರ್( ರಾಯಭಾರಿ) ಇಬ್ರಾಹಿಂ ಸಾಹಿಬ್ ಅನ್ಸಾರ್ ಮೇಲೆ ದಾಳಿಯಿಂದ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಮಲೇಶಿಯಾದ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ದಾಳಿಕೋರರ ಗುರುತುಗಳನ್ನು ಅಥವಾ ಹಿನ್ನೆಲೆಯ ಬಗ್ಗೆ ವಿವರಗಳನ್ನು ಅವರು ಇದುವರೆಗೆ ನೀಡಿಲ್ಲ.
 
ಈ ಘಟನೆಯ ಬಳಿಕ ಕೊಲಂಬೊದಲ್ಲಿ ಶ್ರೀಲಂಕಾದ ವಿದೇಶಾಂಗ ಕಾರ್ಯದರ್ಶಿ ಎಸಾಲಾ ವೀರಾಕೂನ್ ಮಲೇಶಿಯಾದ ಉನ್ನತ ರಾಯಭಾರಿ ವಾನ್ ಜೈದಿ ವಾನ್ ಅಬ್ದುಲ್ಲಾ ಅವರನ್ನು ಕರೆಸಿಕೊಂಡು ಕೊಲಂಬೊದ ರಾಜತಾಂತ್ರಿಕ ನಿಯೋಗಕ್ಕೆ ಸೂಕ್ತ ಭದ್ರತೆ ಒದಗಿಸುವಂತೆ ಆಗ್ರಹಿಸಿದರು. ಸಂಭವನೀಯ ಅಪಾಯದ ಬಗ್ಗೆ ಎಚ್ಚರಿಕೆಗಳನ್ನು ನೀಡಿದ್ದರೂ ಮಲೇಶಿಯಾ ಅಧಿಕಾರಿಗಳು ಅಗತ್ಯ ರಕ್ಷಣೆ ನೀಡುವಲ್ಲಿ ವಿಫಲವಾದ ಬಗ್ಗೆ ವಿದೇಶಾಂಗ ಸಚಿವಾಲಯವು ನಿರಾಶೆ ವ್ಯಕ್ತಪಡಿಸಿದೆ.
 
ಸುಮಾರು 100 ಜನಾಂಗೀಯ ಪ್ರತಿಭಟನೆಕಾರರು ಕಳೆದ ವಾರ ಕೌಲಾಲಂಪುರದಲ್ಲಿ ಸೇರಿ ಅಂತಾರಾಷ್ಟ್ರೀಯ ಸಮಾವೇಶದಲ್ಲಿ ಭಾಗವಹಿಸುತ್ತಿರುವ ಶ್ರೀಲಂಕಾದ ಮಾಜಿ ಅಧ್ಯಕ್ಷ ಮಹೀಂದ್ರ ರಾಜಪಕ್ಷೆ ವಿರುದ್ಧ ರಾಲಿ  ನಡೆಸಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಇಂಗ್ಲೆಂಡ್ ನೂತನ ಪ್ರಧಾನಿ ತೆರೆಸಾರನ್ನು ಭೇಟಿ ಮಾಡಿದ ಪಿಎಂ ಮೋದಿ