Select Your Language

Notifications

webdunia
webdunia
webdunia
webdunia

ಅವಳಾದಳು ಅವನು, ಮತ್ತೀಗ ಅಮ್ಮನಾಗುತ್ತಿದ್ದಾನೆ

ಅವಳಾದಳು ಅವನು, ಮತ್ತೀಗ ಅಮ್ಮನಾಗುತ್ತಿದ್ದಾನೆ
ಲಂಡನ್ , ಬುಧವಾರ, 11 ಜನವರಿ 2017 (11:44 IST)
ಇದೊಂದು ಅಪರೂಪದ ಪ್ರಕರಣ. ಹೇಡನ್ ಕ್ರಾಸ್ ಎಂಬ ಪುರುಷ ಕೆಲವೇ ದಿನಗಳಲ್ಲಿ ಮಗುವಿಗೆ ಜನ್ಮ ನೀಡಲಿದ್ದಾನೆ. ಮಗುವಿಗೆ ಜನ್ಮ ನೀಡಿದ ಬ್ರಿಟನ್‌ನ ಮೊದಲ ಪುರುಷ ಎನಿಸಿಕೊಳ್ಳಲಿದ್ದಾನೆ.

20 ವರ್ಷಗಳ ಹಿಂದೆ ಹೆಣ್ಣಾಗಿ ಜನಿಸಿದ್ದ ಕ್ರಾಸ್ ಮೂರು ವರ್ಷಗಳಿಂದ ಲಿಂಗ ಪರಿವರ್ತನೆಗೆ ಚಿಕಿತ್ಸೆ ಪಡೆಯುತ್ತಿದ್ದಾನೆ. ಲಿಂಗ ಪರಿವರ್ತನೆ ಪ್ರಕ್ರಿಯೆಯ ಅರ್ಧ ದಾರಿ ಕ್ರಮಿಸಿರುವ ಆತನಿಗೆ ಮಗುವನ್ನು ಪಡೆದ ಮೇಲೆ ಪುರುಷನಾಗೋಣ ಎಂದೆನಿಸಿದೆ.
 
ಹೀಗಾಗಿ ಈಗಲೇ ಮಗುವಿಗೆ ಜನ್ಮ ನೀಡಲು ಯೋಚಿಸಿದ ಆತ,ಫೇಸ್‌ಬುಕ್ ಮೂಲಕ ಅನಾಮಿಕ ವ್ಯಕ್ತಿಯಿಂದ ವೀರ್ಯ ದಾನ ಪಡೆದು ಸ್ವತಃ ತಾನೇ ಅದನ್ನು ಇಂಜೆಕ್ಟ್ ಮಾಡಿಕೊಂಡು ಮೊದಲ ಯತ್ನದಲ್ಲೇ ಗರ್ಭ ಧರಿಸಿದ್ದಾನೆ.
 
ಮತ್ತೀಗ 16 ವಾರಗಳ ಗರ್ಭ ಹೊತ್ತಿರುವ ಕ್ರಾಸ್ ನನ್ನದು ಮಿಶ್ರ ಅನುಭವ. ಮಗುವನ್ನು ಚೆನ್ನಾಗಿ ಬೆಳೆಸಿ, ಒಳ್ಳೆಯ ಅಪ್ಪನೆನಿಸಿಕೊಳ್ಳಬೇಕೆನ್ನುತ್ತಾನೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಡೆತ್‌‍‌ನೋಟ್ ಬರೆದಿಟ್ಟು ಎಬಿವಿಪಿ ಕಾರ್ಯಕರ್ತ ಆತ್ಮಹತ್ಯೆಗೆ ಶರಣು