Select Your Language

Notifications

webdunia
webdunia
webdunia
webdunia

ಬೋಟ್ ಮಗುಚಿ ಮೀನುಗಾರರು ನಾಪತ್ತೆ!

ಬೋಟ್ ಮಗುಚಿ ಮೀನುಗಾರರು ನಾಪತ್ತೆ!
ಇಸ್ಲಾಮಾಬಾದ್ , ಭಾನುವಾರ, 23 ಜನವರಿ 2022 (10:34 IST)
ಇಸ್ಲಾಮಾಬಾದ್ : ಅರಬ್ಬಿ ಸಮುದ್ರದಲ್ಲಿ ಎರಡು ಮೀನುಗಾರಿಕಾ ಬೋಟ್ಗಳು ಮಗುಚಿ, 8 ಮಂದಿ ನಾಪತ್ತೆಯಾಗಿದ್ದಾರೆ.

ಮೀನುಗಾರರನ್ನು ಹೊತ್ತೊಯ್ಯುತ್ತಿದ್ದ ದೋಣಿಗಳು ದೇಶದ ದಕ್ಷಿಣ ಸಿಂಧ್ ಪ್ರಾಂತ್ಯದ ಥಟ್ಟಾ ಕರಾವಳಿ ಪ್ರದೇಶದ ಅರಬ್ಬಿ ಸಮುದ್ರದಲ್ಲಿ ಮುಳುಗಿವೆ. 8 ಮಂದಿ ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ. 

ಇಬ್ರಾಹಿಂ ಹೈದರಿ ಪ್ರದೇಶದಿಂದ ಹೊರಟಿದ್ದ ಅಲ್-ಸಿದ್ದಿಕ್ ಮತ್ತು ಅಲ್-ಬಹ್ರಿಯಾ ಹೆಸರಿನ ಎರಡು ಮೀನುಗಾರಿಕಾ ದೋಣಿಗಳು ಮಗುಚಿವೆ. ರಕ್ಷಣಾ ಪಡೆಗಳು ಸುಮಾರು 25 ಮೀನುಗಾರರನ್ನು ರಕ್ಷಿಸಿದ್ದು, ಎಂಟು ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 


Share this Story:

Follow Webdunia kannada

ಮುಂದಿನ ಸುದ್ದಿ

16 ವರ್ಷಗಳ ಬಳಿಕ ಆರೋಪಿಯ ಬಂಧಿಸಿದ ಪೊಲೀಸರು