Webdunia - Bharat's app for daily news and videos

Install App

ಉದ್ಯೋಗಾಕಾಂಕ್ಷಿಗಳಿಗೆ ಆತ್ಮವಿಶ್ವಾಸ ತುಂಬಿದ ಬಿಲ್‌ಗೇಟ್ಸ್

Webdunia
ಶನಿವಾರ, 2 ಜುಲೈ 2022 (12:36 IST)
ವಾಷಿಂಗ್ಟನ್ : ತಾಂತ್ರಿಕತೆ ಮುಂದುವರಿದಂತೆ ಯುವ ಸಮೂಹದಲ್ಲಿ ಉದ್ಯೋಗ ಹುಡುಕುವ ಪೈಪೋಟಿ ಹೆಚ್ಚಾಗಿದೆ.

ಪ್ರತಿಷ್ಠಿತ ಕಂಪೆನಿಗಳಲ್ಲಿ ಉದ್ಯೋಗ ಪಡೆಯಲು ಬಯಸುವ ಯುವಕರು ತಮ್ಮೆಲ್ಲಾ ಕೌಶಲಗಳನ್ನು ಬಳಸಿ, ರೆಸ್ಯೋಮ್ ಅನ್ನು ಸಿದ್ಧಪಡಿಸಿಕೊಳ್ಳುತ್ತಾರೆ. ಕೆಲವರು ಪೇಪರ್ ರೆಸ್ಯೂಮ್ ಮಾಡ್ಕೊಂಡ್ರೆ ಇನ್ನೂ ಕೆಲವರು ಡಿಜಿಟಲ್ ಲಿಂಕ್ಗಳಲ್ಲೇ ಆಕರ್ಷಕ ರೆಸ್ಯೂಮ್ಗಳನ್ನು ಕ್ರಿಯೇಟ್ ಮಾಡಿಕೊಳ್ತಾರೆ.

ಆದರೆ ವಿಶ್ವದ ಅತ್ಯಂತ ಶ್ರೀಮಂತರಲ್ಲಿ ಒಬ್ಬರಾದ ಬಿಲ್ಗೇಟ್ಸ್ 48 ವರ್ಷಗಳ ಹಿಂದೆ ಸಿದ್ದಪಡಿಸಿದ್ದ ತಮ್ಮ ಮೊದಲ ರೆಸ್ಯೂಮ್ ಹಂಚಿಕೊಳ್ಳುವ ಮೂಲಕ ಉದ್ಯೋಗಾಕಾಂಕ್ಷಿ ಯುವಕ ಯುವತಿಯರಿಗೆ ಆತ್ಮವಿಶ್ವಾಸ ಮೂಡಿಸಿದ್ದಾರೆ. 

68 ವರ್ಷ ವಯಸ್ಸಿನ ಬಿಲ್ ಗೇಟ್ಸ್ ತಮ್ಮ 48 ವರ್ಷಗಳ ಹಿಂದೆ ತಯಾರಿಸಿದ್ದ ವೃತ್ತಿಜೀವನದ ಆರಂಭದ ರೆಸ್ಯೂಮ್ ಲಿಂಕ್ಡ್ಇನ್ ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ನೀವು ಇತ್ತೀಚೆಗೆ ಪದವಿ ಪಡೆದವರು, ಕಾಲೇಜು ಯುವಕ – ಯುವತಿಯರು ನಿಮ್ಮ ರೆಸ್ಯೂಮ್ ನನ್ನ 48 ವರ್ಷಗಳ ಹಿಂದಿನ ರೆಸ್ಯೂಮ್ಗಿಂತ ಬಹಳ ಚೆನ್ನಾಗಿರುತ್ತೆ. ನಿಮ್ಮ ರೆಸ್ಯೂಮ್ ಬಹಳ ಉತ್ತಮವಾಗಿ ಕಾಣುತ್ತದೆ ಎಂದು ನನಗೆ ಖಾತ್ರಿಯಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments