Publish Date: Fri, 23 Sep 2022 (08:10 IST)
Updated Date: Fri, 23 Sep 2022 (08:54 IST)
ವಾಷಿಂಗ್ಟನ್ : ಅಮೆರಿಕದ ಅಧ್ಯಕ್ಷ ಜೋ ಬೈಡನ್ ಬುಧವಾರ ಕಾರ್ಯಕ್ರಮವೊಂದರಲ್ಲಿ ಭಾಷಣದ ಬಳಿಕ ವೇದಿಕೆಯಲ್ಲಿ ಮೈಮರೆತಂತೆ ವರ್ತಿಸಿದ್ದಾರೆ.
ಭಾಷಣದ ಬಳಿಕ ವೇದಿಕೆಯಿಂದ ಆಚೆ ಹೋಗಬೇಕಿದ್ದ ಬೈಡನ್ ಯಾವುದೋ ಯೋಚನೆಯಲ್ಲಿ ಕಳೆದು ಹೋದಂತೆ ಭಾಸವಾಗಿರುವ ವೀಡಿಯೋ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಅಮೆರಿಕದ ಅಧ್ಯಕ್ಷ ನಿನ್ನೆ ನ್ಯೂಯಾರ್ಕ್ನಲ್ಲಿ ನಡೆದ ಗ್ಲೋಬಲ್ ಫಂಡ್ನ 7ನೇ ರಿಪ್ಲೇಸ್ಮೆಂಟ್ ಕಾನ್ಫರೆನ್ಸ್ ಅನ್ನು ಉದ್ದೇಶಿಸಿ ಮಾತನಾಡಿದ್ದರು. ಬಳಿಕ ಅವರು ವೇದಿಕೆಯಿಂದ ಹೊರಡಲು ಮುಂದಾಗಿದ್ದು, 2 ಹೆಜ್ಜೆ ಮುಂದೆ ಹೋಗಿ ಮತ್ತೆ ಅಲ್ಲಿಯೇ ಯಾವುದೋ ಯೋಚನೆಯಲ್ಲಿ ಮೈಮರೆತಿದ್ದು ವೀಡಿಯೋದಲ್ಲಿ ಕಂಡುಬಂದಿದೆ.
ಬೈಡನ್ ಅವರು ವೇದಿಕೆಯಿಂದ ಕೆಳಗೆ ಇಳಿಯಬೇಕೇ ಬೇಡವೇ ಎಂಬ ಯೋಚನೆಯಲ್ಲಿ ನಿಂತಂತೆ ತೋರಿದೆ. ಬಳಿಕ ಓದಲಾದ ಧನ್ಯವಾದ ಟಿಪ್ಪಣಿ ಬೈಡನ್ ಅವರ ಗಮನ ಸೆಳೆದಿದೆ.