Select Your Language

Notifications

webdunia
webdunia
webdunia
webdunia

ಪ್ಲೀಸ್ ...ನಮಗೂ ಎನ್‍ಎಸ್‌ಜಿ ಸದಸ್ಯತ್ವ ಕೊಡಿ ಎಂದ ಪಾಕ್ ‌

ಪ್ಲೀಸ್ ...ನಮಗೂ ಎನ್‍ಎಸ್‌ಜಿ ಸದಸ್ಯತ್ವ ಕೊಡಿ ಎಂದ ಪಾಕ್ ‌
ಲಾಹೋರ್ , ಗುರುವಾರ, 9 ಜೂನ್ 2016 (19:10 IST)
ಭಾರತಕ್ಕೆ ಎನ್‌ಎಸ್‌ಜಿ ಸದಸ್ಯತ್ವ ನೀಡಲು ಜಾಗತಿಕ ಬೆಂಬಲ ದೊರೆಯುತ್ತಿದ್ದಂತೆ ಪಾಕಿಸ್ತಾನ ಕೂಡಾ ನನಗೂ ಎನ್‌ಎಸ್‌ಜಿ ಸದಸ್ಯತ್ವ ಕೊಡಿ ಎಂದು ಅಮೆರಿಕ ಸರಕಾರಕ್ಕೆ ದುಂಬಾಲು ಬಿದ್ದಿದೆ.
 
ಕಳೆದ ಮಂಗಳವಾರದಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಭಾರತದ ಎನ್‌ಎಸ್‌‌ಜಿ ಸದಸ್ಯತ್ವ ಅರ್ಜಿಗೆ ಅಧಿಕೃತವಾಗಿ ಹಸ್ತಾಕ್ಷರ ಹಾಕಿದರು. 
 
ಡಾನ್ ಪತ್ರಿಕೆಯ ಪ್ರಕಾರ, ಕಳೆದ ತಿಂಗಳು ವಿಯನ್ನಾ ದೇಶದಲ್ಲಿ ಪಾಕಿಸ್ತಾನ ಎನ್‌ಎಸ್‌ಜಿ ಸದಸ್ಯತ್ವ ಪಡೆಯಲು ಅಮೆರಿಕೆಗೆ ಅರ್ಜಿ ಸಲ್ಲಿಸಿತ್ತು. ಆದರೆ, ಅಮೆರಿಕ ಪಾಕಿಸ್ತಾನದ ಬೇಡಿಕೆಗಳಿಗೆ ಸೊಪ್ಪು ಹಾಕಿರಲಿಲ್ಲ.
 
ಪಾಕಿಸ್ತಾನದ ಅಮೆರಿಕ ರಾಯಭಾರಿ ಜಲೀಲ್ ಅಬ್ಬಾಸ್ ಜಿಲಾನಿ, ಅಮೆರಿಕದ ವಿದೇಶಾಂಗ ವ್ಯವಹಾರಗಳ ಸೆನೆಟ್ ಸಮಿತಿಗೆ ಪತ್ರ ಬರೆದು ಎನ್‌ಎಸ್‌ಜಿ ಸದಸ್ಯತ್ವ ಪಡೆಯಲು ಪಾಕ್ ಅರ್ಹವಾಗಿದೆ ಎಂದು ಅರ್ಜಿ ಸಲ್ಲಿಸಿದ್ದರು.
 
ನ್ಯೂಕ್ಲೀಯರ್ ತಂತ್ರಜ್ಞಾನ ವಿಭಾಗದಲ್ಲಿ ಕೌಶಲ್ಯತೆ, ಸಾಮರ್ಥ್ಯ ಮತ್ತು ಕಳೆದ 42 ವರ್ಷಗಳಿಂದ ಪರಮಾಣು ಕೇಂದ್ರಗಳನ್ನು ಸುರಕ್ಷಿತವಾಗಿಟ್ಟಿದೆ. ಭವಿಷ್ಯದಲ್ಲಿ ಇಂಧನ ಸುರಕ್ಷತೆ ದೊರೆಯಲು ಮತ್ತು ಆರ್ಥಿಕ ಅಭಿವೃದ್ಧಿಗಾಗಿ ಪಾಕಿಸ್ತಾನಕ್ಕೆ ಎನ್‌ಎಸ್‌ಜಿ ಸದಸ್ಯತ್ವ ನೀಡಬೇಕು ಎಂದು ಒತ್ತಾಯಿಸಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಅನುಪಮಾ ಶೆಣೈ ಅಧಿಕಾರದಲ್ಲಿ ಮುಂದುವರೆಯಲಿ: ಪೇಜಾವರ ಶ್ರೀಗಳು