ವಾಷಿಂಗ್ಟನ್ : ಆಪಲ್ ತನ್ನ ಆಪ್ ಸ್ಟೋರ್ನಿಂದ ಟ್ವಿಟ್ಟರ್ ಅನ್ನು ನಿರ್ಬಂಧಿಸುವುದಾಗಿ ಬೆದರಿಕೆ ಹಾಕಿದೆ. ಆದರೆ ನಿರ್ಬಂಧ ಹೇರಲು ಕಾರಣವೇನು ಎಂಬುದನ್ನೇ ತಿಳಿಸಿಲ್ಲ ಎಂದು ಟ್ವಿಟ್ಟರ್ ಸಿಇಒ ಎಲೋನ್ ಮಸ್ಕ್ ಆರೋಪಿಸಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಮಸ್ಕ್, ಆಪಲ್ ಕಂಪನಿ ಈಗಾಗಲೇ ತನ್ನ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ನಮ್ಮ ಜಾಹೀರಾತು ನೀಡುವುದನ್ನು ನಿಲ್ಲಿಸಿದೆ. ಇದೀಗ ಆಪ್ ಸ್ಟೋರ್ನಿಂದ ಟ್ವಿಟ್ಟರ್ ಅನ್ನು ತೆಗೆದುಹಾಕುವುದಾಗಿ ಬೆದರಿಕೆ ಒಡ್ಡಿದೆ ಎಂದು ತಿಳಿಸಿದ್ದಾರೆ.
ಮಸ್ಕ್ ಇತ್ತೀಚೆಗೆ ಟ್ವಿಟ್ಟರ್ನಲ್ಲಿ ಮಾಡಲು ಮುಂದಾಗಿರುವ ಹೊಸ ಬದಲಾವಣೆಗಳ ಕುರಿತು ತಿಳಿಸಿದ್ದಾರೆ.