Select Your Language

Notifications

webdunia
webdunia
webdunia
webdunia

ಅಪಾರ್ಟ್ಮೆಂಟ್ ಕುಸಿತ!

ಹರಿಯಾಣ , ಶನಿವಾರ, 12 ಫೆಬ್ರವರಿ 2022 (07:34 IST)
ಗುರ್ಗಾಂವ್ : ಅಪಾರ್ಟ್ಮೆಂಟ್ನ ಮೇಲ್ಛಾವಣಿ ಕುಸಿದು ಇಬ್ಬರು ಸಾವನ್ನಪ್ಪಿ, 12 ಮಂದಿ ಸಿಲುಕಿಕೊಂಡಿರುವ ಘಟನೆ ಗುರುಗ್ರಾಮದ ಸೆಕ್ಟರ್ 109 ರಲ್ಲಿನ ಚಿಂಟೆಲ್ಸ್ ಪ್ಯಾರಾಡಿಸೊ ವಸತಿ ಸಂಕೀರ್ಣದಲ್ಲಿ ನಡೆದಿದೆ.

ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ಆರು ಮಂದಿ ಸಿಲುಕಿಕೊಂಡಿದ್ದಾರೆ ಎಂದು ವರದಿಯಾಗಿದೆ. ಪೊಲೀಸರು ಮತ್ತು ಇತರ ಜಿಲ್ಲಾ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ. 

ಮೊದಲ ಮಾಹಿತಿ ಪ್ರಕಾರ, 17 ಅಂತಸ್ತಿನ ಕಟ್ಟಡದ 6 ಮಹಡಿಗಳು ಕುಸಿದಿವೆ. ಕಟ್ಟಡದಲ್ಲಿ ವಾಸವಾಗಿರುವ ಕೆಲವು ಕುಟುಂಬಗಳು ಕೂಡ ಸಿಕ್ಕಿಬಿದ್ದಿರುವ ಆತಂಕವಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆಗಳ ಹಲವು ತಂಡಗಳು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ. ಅಪಾರ್ಟ್ಮೆಂಟ್ನಲ್ಲಿರುವ 4 ಕುಟುಂಬಗಳು ಅವಶೇಷಗಳಡಿ ಸಿಲುಕಿವೆ ಎನ್ನಲಾಗಿತ್ತು. 

ಗುರುಗ್ರಾಮ ಕಟ್ಟಡ ಕುಸಿತದ ಬಗ್ಗೆ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಪರಿಸ್ಥಿತಿಯನ್ನು ವೈಯಕ್ತಿಕವಾಗಿ ಗಮನಿಸುತ್ತಿದ್ದಾರೆ ಅಂತ ಹರಿಯಾಣ ಸರ್ಕಾರ ತಿಳಿಸಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ಸಂಕಷ್ಟದತ್ತ ರಮೇಶ್ ಜಾರಕಿಹೊಳಿ?