Select Your Language

Notifications

webdunia
webdunia
webdunia
webdunia

ಇಸ್ರೇಲ್ ಸೇನಾ ದಾಳಿಗೆ ಹಿಜ್ಬುಲ್ಲಾ ಸಂಘಟನೆಯ ಮತ್ತೊಬ್ಬ ನಾಯಕ ಸಾವು

Hezbollah leader Nabil Kaouk

Sampriya

ಜೇರುಸಲೇಂ , ಭಾನುವಾರ, 29 ಸೆಪ್ಟಂಬರ್ 2024 (17:27 IST)
Photo Courtesy X
ಜೇರುಸಲೇಂ: ಇಸ್ರೇಲ್ ಸೇನಾ ದಾಳಿಗೆ ಶುಕ್ರವಾರವಷ್ಟೇ ಹಿಜ್ಬುಲ್ಲಾದ ಮುಖ್ಯಸ್ಥ ಸಯ್ಯದ್ ಹಸನ್‌ ನಸ್ರಲ್ಲಾರನ್ನು ಸಾವನ್ನಪ್ಪಿದ ಬೆನ್ನಲ್ಲೇ ಇದೀಗ ಸಂಘಟನೆಯ ಮತ್ತೊಬ್ಬ ಮುಖಂಡ ಸಾವನ್ನಪ್ಪಿರುವ ಬಗ್ಗೆ ಇಸ್ರೇಲ್ ಸೇನಾಧಿಕಾರಿಗಳು ತಿಳಿಸಿದ್ದಾರೆ.

ಶನಿವಾರ ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ ಹಿಜ್ಬುಲ್ಲಾ ಸಂಘಟನೆಯ ಮತ್ತೊಬ್ಬ ಮುಖಂಡ ಮೃತಪಟ್ಟಿದ್ದಾನೆ ಎಂದು ಇಸ್ರೇಲ್ ಸೇನಾಧಿಕಾರಿಗಳು ತಿಳಿಸಿದ್ದಾರೆ.

ಶನಿವಾರ ಇಸ್ರೇಲ್ ನಡೆಸಿದ ದಾಳಿಯಲ್ಲಿ ಹಿಜ್ಬುಲ್ಲಾ ಕೇಂದ್ರ ಸಮಿತಿಯ ಉಪ ಮುಖ್ಯಸ್ಥ ನಭಿ ಕಾವುಕ್ ಎನ್ನುವರು ಮೃತಪಟ್ಟಿದ್ದಾರೆ. ಶುಕ್ರವಾರವಷ್ಟೇ ಹಿಜ್ಬುಲ್ಲಾದ ಮುಖ್ಯಸ್ಥ ಸಯ್ಯದ್‌ ಹಸನ್‌ ನಸ್ರಲ್ಲಾರನ್ನು ಇಸ್ರೇಲ್ ವಾಯುದಾಳಿ ಮಾಡಿ ಹತ್ಯೆ ಮಾಡಿತ್ತು.

ನಸ್ರಲ್ಲಾ ಸಾವು ಬೆನ್ನಲ್ಲೇ ಹಿಜ್ಬುಲ್ಲಾ ಸಂಘಟನೆಯ ಜವಾಬ್ದಾರಿ ತಾನು ಹೊರುವುದಾಗಿ ಹೇಳಿಕೊಂಡಿದ್ದ ನಭಿ ಕಾವುಕ್ ಇದೀಘ ಸಾವನ್ನಪ್ಪಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ತಮಿಳುನಾಡು ಡಿಸಿಎಂ ಆಗಿ ಉದಯನಿಧಿ ಸ್ಟಾಲಿನ್ ಪ್ರಮಾಣ ವಚನ ಸ್ವೀಕಾರ