Select Your Language

Notifications

webdunia
webdunia
webdunia
webdunia

ಅಮೆರಿಕಾದ ಒತ್ತಡಕ್ಕೆ ಮಣಿದ ಪಾಕ್: ಹಫೀಜ್‌ಗೆ ಮತ್ತೆ ಗೃಹ ಬಂಧನ

ಅಮೆರಿಕಾದ ಒತ್ತಡಕ್ಕೆ ಮಣಿದ ಪಾಕ್: ಹಫೀಜ್‌ಗೆ ಮತ್ತೆ ಗೃಹ ಬಂಧನ
ಇಸ್ಲಾಮಾಬಾದ್ , ಶನಿವಾರ, 13 ಮೇ 2017 (16:34 IST)
ಅಮೆರಿಕದ ಒತ್ತಡಕ್ಕೆ ಮಣಿದ ಪಾಕಿಸ್ತಾನ ಜಮಾತ್ ಉದ್ ದಾವಾ ಉಗ್ರಗಾಮಿ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್‌ಗೆ ಮತ್ತೆ ಗೃಹ ಬಂಧನ ವಿಧಿಸಿದೆ.
 
ಕಳೆದ ವರ್ಷ ಗೃಹ ಬಂಧನಕ್ಕೆ ಗುರಿಯಾಗಿದ್ದ ಹಫೀಜ್ ಸಯೀದ್ ಕೋರ್ಟ್ ಮೊರೆ ಹೋಗಿ ಗೃಹಬಂಧನದಿಂದ ಮುಕ್ತವಾಗಿದ್ದರು. ಇದೀಗ ಅಮೆರಿಕ ಹಾಕಿದ ಒತ್ತಡಕ್ಕೆ ಪಾಕ್ ಮಣಿದಿದೆ.  
 
ಭಾರತದಲ್ಲಿ ನಡೆದ ಅನೇಕ ಉಗ್ರ ದಾಳಿಗಳಲ್ಲಿ ಹಫೀಜ್ ಸಯೀದ್ ಕೈವಾಡವಿದೆ ಎನ್ನುವ ದಾಖಲೆಗಳನ್ನು ಸರಕಾರ ಅಮೆರಿಕ ಮತ್ತು ಪಾಕಿಸ್ತಾನಕ್ಕೆ ರವಾನಿಸಿತ್ತು. ಆದರೆ, ಪಾಕಿಸ್ತಾನ ಮಾತ್ರ ದಾಖಲೆಗಳಲ್ಲಿ ಸತ್ಯಾಂಶವಿಲ್ಲ ಎಂದು ತಿರಸ್ಕರಿಸಿತ್ತು.
 
ಇದೀಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉಗ್ರವಾದವನ್ನು ಸಹಿಸುವುದಿಲ್ಲ ಎಂದು ಕಟ್ಟೆಚ್ಚರಿಕೆ ನೀಡಿದ್ದರಿಂದ ಪಾಕಿಸ್ತಾನ ಬಾಲ ಮುದುರಿಕೊಂಡು ಹಫೀಜ್ ಸಯೀದ್‌ಗೆ ಗೃಹ ಬಂಧನ ವಿಧಿಸಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ರೋಹ್ಟಕ್‌ನಲ್ಲಿ ನಿರ್ಭಯಾ ಪ್ರಕರಣಕ್ಕಿಂತ ಹೀನ ಕೃತ್ಯ ಬಹಿರಂಗ