Select Your Language

Notifications

webdunia
webdunia
webdunia
webdunia

ಯುಕೆ ಲೇಬರ್ ಪಕ್ಷದ ಸಾದಿಕ್ ಖಾನ್ ಲಂಡನ್ ಹೊಸ ಮೇಯರ್

uk labour party
ಲಂಡನ್ , ಶನಿವಾರ, 7 ಮೇ 2016 (17:26 IST)
ಬ್ರಿಟನ್ ಮುಖ್ಯ ವಿರೋಧ ಪಕ್ಷವು ಶನಿವಾರ ಭರ್ಜರಿ ಜಯವನ್ನು ಸಾಧಿಸಿ ಸಾದಿಕ್ ಖಾನ್ ಲಂಡನ್ ನೂತನ ಮೇಯರ್ ಹುದ್ದೆಗೆ ಆಯ್ಕೆಯಾದರು.  8 ವರ್ಷಗಳ ಬಳಿಕ ಲೇಬರ್ ಪಕ್ಷದ ಆಡಳಿತವನ್ನು ಲಂಡನ್‌ಗೆ ತರಲಾಗಿದೆ. 
 
ಅವರ ಎದುರಾಳಿ ಜ್ಯಾಕ್ ಗೋಲ್ಡ್‌ಸ್ಮಿತ್ ಅವರನ್ನು ಶೇ. 46ರಷ್ಟು ಓಟುಗಳ ಹಂಚಿಕೆಯೊಂದಿಗೆ ಗೆದ್ದ ಸಾದಿಕ್  ಮೊದಲ ಮುಸ್ಲಿಂ ಮೇಯರ್ ಆಗಿ ಆಯ್ಕೆಯಾದರು.  ಖಾನ್ ಉಗ್ರಗಾಮಿಗಳ ಜತೆ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪಕ್ಕೆ ಕಿವಿಗೊಡದ ಮತದಾರರು ಅವರನ್ನು ಆಯ್ಕೆ ಮಾಡಿದರು. ಖಾನ್ ಅವರು ಕನ್ಸರ್ವೇಟಿವ್ ಬೋರಿಸ್ ಜಾನ್ಸನ್ ಅವರಿಗೆ ಬದಲಿಯಾಗಿ ನೇಮಕವಾಗಿದ್ದು, ಜಾನ್ಸನ್ 8 ವರ್ಷಗಳ ಕಾಲ ಮೇಯರ್ ಹುದ್ದೆಯಲ್ಲಿದ್ದರು. 
 
ದಕ್ಷಿಣ ಲಂಡನ್ ಟೂಟಿಂಗ್‌ನಲ್ಲಿ ಪಾಕಿಸ್ತಾನ ವಲಸೆಗಾರ ಕುಟುಂಬಕ್ಕೆ ಜನಿಸಿದ ಸಾದಿಕ್ ತಂದೆ ಅಮಾನುಲ್ಲಾ ಖಾನ್ ಬಸ್ ಚಾಲಕ ಹುದ್ದೆಯಲ್ಲಿದ್ದರು. ಅವರ ತಾಯಿ ಸೆಹ್ರನ್ ಹೊಲಿಗೆ ಕಸುಬನ್ನು ನಿರ್ವಹಿಸಿದರು. ಇವರಿಂದ ಪ್ರೇರಿತರಾದ ಖಾನ್ ಚಿಕ್ಕಂದಿನಲ್ಲೇ ಪೇಪರ್ ಹಾಕುವ ಅಥವಾ ಕಟ್ಟಡ ಸೈಟ್‌ನಲ್ಲಿ ಕೆಲಸ ಮಾಡುತ್ತಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ನಟಿ, ವಿಧಾನ ಪರಿಷತ್ ಸದಸ್ಯೆ ತಾರಾ ವಿರುದ್ಧ ಕಿರುಕುಳದ ಆರೋಪ