Select Your Language

Notifications

webdunia
webdunia
webdunia
webdunia

ಬಾಲ ಬಿಚ್ಚೋರು, ಬಾಂಬ್ ಹಾಕೋರಿಗೆಲ್ಲ ಇಲ್ಲಿ ಮರಣ ದಂಡನೆ

ಬಾಲ ಬಿಚ್ಚೋರು, ಬಾಂಬ್ ಹಾಕೋರಿಗೆಲ್ಲ ಇಲ್ಲಿ ಮರಣ ದಂಡನೆ

geetha

ಸೌದಿ ಅರೇಬಿಯಾ , ಮಂಗಳವಾರ, 5 ಮಾರ್ಚ್ 2024 (17:00 IST)
Photo Courtesy: Twitter
ಸೌದಿ ಅರೇಬಿಯಾ-ಜಗತ್ತಿನ ಹಲವು ಭಾಗಗಳಲ್ಲಿ ಪುಂಡಾಟಗಳು, ಹಿಂಸಾತ್ಮಕ ಕೃತ್ಯಗಳು, ಇಲ್ಲ ಸಲ್ಲ ಸಲ್ಲದ ಆಟೋಟೋಪಗಳಿಗೆ ಎಗ್ಗಿಲ್ಲದೇ ನಡೆದೆ ಹೋಗ್ತಿವೆ.. ಇಂತಹ ಹೀನಾವಾದ ಕೆಲಸಗಳನ್ನು ಮಾಡೋರಿಗೆ ಗಂಭೀರವಾದ ಶಿಕ್ಷೆಗಳನ್ನು ನೀಡುವುದು ಸೂಕ್ತ. ಇಲ್ಲವಾದಲ್ಲೆ ಇವರ ಕುಕೃತ್ಯಗಳಿಗೆ ಕಡಿವಾಣ ಹಾಕೋದಕ್ಕೆ ಕನಸ್ಸಿನಲ್ಲೂ ಸಾಧ್ಯವಾಗೋದಿಲ್ಲ.. ಆದ್ರೆ ಒಂದು ಕಡೆ ಇದ್ದಂತೆ, ಸಲೀಸಾದ ಕಾನೂನುಗಳು ಜಗತ್ತಿನ ಎಲ್ಲ ಮೂಲೆಗಲ್ಲಿ ಇರೋದಕ್ಕೆ ಸಾಧ್ಯವಿಲ್ಲ.
 
ಆದ್ರೆ ಇಲ್ಲೊಂದು ಕಡೆ ತಪ್ಪು ಮಾಡಿದ್ರೆ, ಮುಗಿದೇ ಹೋಯ್ತು, ಅದೆಷ್ಟೇ ತಿಪ್ಪರಲಾಗ ಹಾಕಿದ್ರೂ, ತಪ್ಪಿಸಿಕೊಳ್ಲೋದಕ್ಕೆ ಆಗಲ್ಲ.. ಶಿಕ್ಷೆ ಕಟ್ಟಿಟ್ಟಬುತ್ತಿ.. ಅದು ಅಂತಿAತಹ ಫನಿಶ್‌ಮೆಂಟ್ ಅಲ್ಲ. ಸಾವಿನ ಶಿಕ್ಷೆ.. ಅರ್ಥಾತ್... ನೇರವಾಗಿ ಮರಣದಂಡನೆಗೆ ಹಾಕಿ ಬಿಡೋದು.. ಹಾಗಾಗಿ ಇದೇ ಭಯವೇ ಇವತ್ತು ಆ ನಾಡಲ್ಲಿ ಅಪರಾಧಗಳ ಪ್ರಮಾಣ ಅಪರೂಪವಾಗಿ ಬಿಟ್ಟಿವೆ.
 
ಯೆಸ್.. ಈ ದೇಶದಲ್ಲಿ ಏನಾದ್ರೂ ಮಾಡಬಾರದ ಕೆಲಸ ಮಾಡಿ ಸಿಕ್ಕಿ ಬಿದ್ರೆ, ಮುಗಿದೆ ಹೋದಂತೆ ಅವರ ಕತೆ.. ಅದು ಉಗ್ರ ಆಗಿರಲೀ, ಇಲ್ಲ ಸಾಮಾನ್ಯ ನಾಗರಿಕನೇ ಇರಲೀ.. ತಲೆಗಳು ಹೋಳಾಗಿ ಬಿಡೋದು ಶತಸಿಧ್ದ...
 
 
ಅರೇ.. ಹೀಗೆಲ್ಲ ಸಣ್ಣಪುಟ್ಟ ತಪ್ಪು ಮಾಡಿದ್ರೂ, ಶಿರಚ್ಛೇದ ಮಾಡಿ ಶಿಕ್ಷೆಯನ್ನು ಕೊಡುವ ಆ ದೇಶ ಯಾವುದು ಅಂದುಕೊAಡ್ರಾ.. ಅದು ಬೇರೆ ಯಾವುದು ಅಲ್ಲ, ಇಡೀ ಮುಸ್ಲಿಂ ಜಗತ್ತಿನ ದೊರೆಯಾಗಿರುವ ಅರಬ್ ರಾಷ್ಟç. ಅಂದ್ರೆ ಸೌದಿ ಅರೇಬೀಯಾ.. ಇಲ್ಲಿ ಇರೋ ಬಿಗಿಯಾದ ಕಾನೂನುಗಳು ಬಹುಷಃ ಜಗತ್ತಿನ ಯಾವುದೇ ಮೂಲೆಯಲ್ಲಿ ಇರೋದಕ್ಕೆ ಸಾಧ್ಯವಿಲ್ಲ ಬಿಡಿ.. 
 
ಸೌದಿ ಅರೇಬಿಯಾ.... ತೈಲ ರಾಷ್ಟ... ಜಗತ್ತಿನ ಬಹುತೇಕ ದೇಶಗಳಿಗೆ ತೈಲವನ್ನು ರಪ್ತು ಮಾಡುವ ದೇಶವಿದು.... ಇಂತಹ ಅರಬ್‌ರ ನಾಡಲ್ಲಿ ಇರುವ ಕಾನೂನುಗಳು ಮಾತ್ರ ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸುವಂತವು... ಅಬ್ಬಾಬ್ಬ ಇಲ್ಲಿ ಯಾರೆ ಆದರೂ ಕೂಡ ಸಣ್ಣ ಪುಟ್ಟ ತಪ್ಪು ಮಾಡಿದ್ರೂ ಕೂಡ, ತಲೆಗಳನ್ನ ಚೆಂಡಾಡಿ ಬಿಡಲಾಗುತ್ತೆ.... ಹಾಗಾಗಿಯೇ ಇಲ್ಲಿ ಕಳ್ಳ ಕಾಕರರು, ಉಗ್ರರರು ಫುಲ್ ಸೈಲೆಂಟ್.... ತುಟಿಕ್ ಪಿಟಿಕ್ ಅಂತಾನೂ ಬಾಯಿ ಮಿಟಿಕಿಸೋದೇ ಇಲ್ಲ... ಅಪ್ಪಿ ತಪ್ಪಿ ಏನಾದ್ರೂ ಎಡವಟ್ಟು ಮಾಡಿದ್ರೋ.... ಗಲ್ಲುಶಿಕ್ಷೆ ಖಾಯಂ..... ಶಿರಚ್ಚೇಧ ಗ್ಯಾರಂಟಿ..... 
 
ಇಲ್ಲಿ ಬಾಲ ಬಿಚ್ಚಿದ್ರೆ ಬಾಲ ಮಾತ್ರ ಅಲ್ಲ ಜೀವವೇ ಇರಲ್ಲ
ಬೇರೆ ಕಡೆ ಮಾಡಿದ ಹಾಗೆ ಇಲ್ಲಿ ಮಾಡಿದ್ರೆ ಮುಗಿಯುತ್ತೆ ಕಥೆ
ಬೇರೆಡೆ ಪುಂಡಾಟ, ಕಳ್ಳಾಟ ಮಾಡುವವರು ಇಲ್ಲಿ ಸೈಲೆಂಟ್
 
ಬೇರೆ ಕಡೆ ಏನೇ ಮಾಡಿದ್ರೂ, ಸಲೀಸಾಗಿ, ರಾಜರೋ಼ಷವಾಗಿ ಓಡಾಡಿಕೊಂಡು ಹೋಗಿ ಬಿಡಬಹುದು.. ಆದ್ರೆ ಅರಬ್‌ರ ನೆಲದಲ್ಲಿ ಹೀಗೆಲ್ಲ ಮಾಡೋದಕ್ಕೆ ಸಾಧ್ಯವಿಲ್ಲ.. ಯಾಕಂದ್ರೆ ಎಲ್ಲ ಕಡೆಯಂತಲ್ಲ ಇಲ್ಲಿರುವ ಕಾನೂನು... ಇಲ್ಲಿರೋದು ಅಪರಾಧಿಗಳನ್ನು ಅಕ್ಷರಶಃ ಬೆಚ್ಚಿಭಿಳಿಸಿ ಬೀಡುವ ಷರಿಯಾ ಕಾನೂನು.... ಈ ನೆಲದ ಕಾನೂನು ಅದೆಷ್ಟು ಭಯಂಕರವಾಗಿದೆ ಅನ್ನೋದಕ್ಕೆ ಕಳೆದ ಹಲವು ವರ್ಷಗಿಳಿಂದ ಆಗ್ತಾ ಇರುವ ಘಟನೆಗಳು ಸಾಕ್ಷಿಗಳನ್ನು ನೀಡುತ್ತದೆ...
ಇಲ್ಲಿ ಉಗ್ರರೇ ತಪ್ಪು ಮಾಡೋದಕ್ಕೆ ಹೆದರುತ್ತಾರೆ.. ಸೈಲೆಂಟಾಗಿ ಮೂಲೆಯಲ್ಲಿ ಕುಂತು, ಮೌನವಾಗಿ ಧ್ಯಾನಸ್ಥರಾಗಿ ಬಿಡ್ತಾರೆ..... ಯಾಕಂದ್ರೆ ಏನಾದ್ರೂ ಕುಕೃತ್ಯ ಮಾಡಿ ಸಿಕ್ಕಿ ಬಿದ್ರೆ, ತಲೆಗಳು ಚೆಂಡಾಡುವ ಭಯ ಇವರನ್ನ ಕಾಡ್ತಿದೆ.... ಅದಕ್ಕಾಗಿಯೇ ಅರಬ್ ದೇಶದಲ್ಲಿ ಅಪರಾಧ ಪ್ರಕರಣಗಳು ಕಡಿಮೆ..... 
 
ಬೇರೆ ಕಡೆ ವೈಲೆಂಟ್ ಈ ದೇಶದಲ್ಲಿ ಮಾತ್ರ ಎಲ್ಲರೂ ಸೈಲೆಂಟ್
ಉಗ್ರರು ಮಾತ್ರವಲ್ಲ, ಲೋಕಲ್ ಕಳ್ಳ ಕಾಕರಿಗೂ ಭಯವೋ ಭಯ
 
ಜಗತ್ತಿನ ನಾನಾ ಭಾಗಗಳಲ್ಲಿ ನಡೆಯುವ ಅಪರಾಧಗಳಂತೆ, ಇಲ್ಲಿ ಏನೇನು ನಡೆಯೋದಿಲ್ಲ... ಇಲ್ಲೆನಿದ್ರೂ ಉಗ್ರರಿಗೆ ಉಗ್ರರರೇ ತಮ್ಮನು ತಾವೇ ನೋಡಿಕೊಂಡು ಸುಮ್ಮನಿರಬೇಕಾಷ್ಟೇ.. ಉಗ್ರರು ಬಾಲ ಬಿಚ್ಚೋದಿರಲೀ, ಬಾಲ ಇಟ್ಟುಕೋಳ್ಲೋದೇ ಕಷ್ಟ... ಬರೀ ಉಗ್ರುರು ಮಾತ್ರವಲ್ಲ, ಲೋಕಲ್ ಕಳ್ಳ ಕಾಕರಿಗೂ ಭಯವೋ ಭಯ.
 
ಸೌದಿ ಅರೇಬಿಯಾದಲ್ಲಿ ತಪ್ಪು ಮಾಡಿದವರಿಗೆ ಶಿರಚ್ಚೇಧ ಮೂಲಕ ಮರಣದಂಡನೆಯನ್ನು ಜಾರಿಗೊಳಿಸಲಾಗ್ತಿದೆ. ಅದರಲ್ಲೂ ಮಾದಕವಸ್ತು ಬಳಕೆ, ಕಳ್ಳತನ ಮಾಡೋರಿಗೆ, ಇದರ ಜೊತೆಗೆ ಭಯೋತ್ಪಾದಕ ಕೃತ್ರಗಳಲ್ಲಿ ಭಾಗಿಯಾಗುವರಿಗೆ, ಸೌದಿಯಲ್ಲಿ ನೀಡೋದು ಗಲ್ಲುಶಿಕ್ಷೆ..... ಅದು ಅತ್ಯಂತ ಭೀಕರವಾಗಿ... ಎಲ್ರರಿಗೂ ಕಾಣುವ ಹಾಗೆ.. ನಡು ಬೀದಿಯಲ್ಲೇ ಘನಘೋರವಾಗಿ ಶಿರಚ್ಚೇಧ ಮಾಡುವ ಮೂಲಕ... ಇದನ್ನು ನೋಡಿದರೇ ತಪ್ಪು ಮಾಡೋದಿರಲೀ, ಅಂತಹ ಯೋಚನೆಯೂ ಬರೋದಕ್ಕೆ ಸಾಧ್ಯವಿಲ್ಲ.....
 
ಇಲ್ಲಿನ ಷರಿಯಾ ಕಾನೂನು ಬೇಕಾಬಿಟ್ಟಿಯಾಗಿ ಪುಂಡಾಟ, ಕಳ್ಳತನ, ಹೀಗೆ ಇನ್ನಿತರೆ ಸಣ್ಣ ಪುಟ್ಟ ತಪ್ಪು ಮಾಡಿದವರಿಗೂ ಗಲ್ಲುಶಿಕ್ಷೆಯನ್ನು ಪ್ರಕಟಿಸಿ ಬಿಡುತ್ತದೆ.... ಹಾಗಾಗಿಯೇ ಇಲ್ಲಿ ಶೂನ್ಯ ಅಪರಾಧ ಪ್ರಕರಣಗಳು.... ಆಕಸ್ಮಾತ್ ಯಾರಾದ್ರೂ ಸೌದಿ ಅರೇಬಿಯಾದ ನೆಲದಲ್ಲಿ ಹೋಗಿ, ಕಳ್ಳತನ, ಭಯೋತ್ಪಾದನೆ ಸಂಚುಗಳನ್ನು ರೂಪಿಸೋದಕ್ಕೆ ಏನಾದ್ರೂ ಸ್ಕೆಚ್ ಹಾಕಿಕೊಂಡ್ರೆ.... ತಲೆಗಳು ಬೆಂಡಾಡೋದು ಕಟ್ಟಿಟ್ಟ ಬುತ್ತಿ... ಜಸ್ಟ್,, ದುಷೃತ್ಯಗಳನ್ನು ಮಾಡೋದಕ್ಕೂ ಮುನ್ನ ಯೋಚನೆ ಮಾಡಬೇಕಿದೆ.. ಯಾಕಂದ್ರೆ.... ಸಿಕ್ಕಿ ಬಿದ್ರೆ, ಸೌದಿಯಾ ಷರಿಯಾ ಕಾಯ್ದೆ.... ಕಣ್ಣ ಮುಂದೇ ಬಂದು ಬಿಡುತ್ತೇ..!
 
ಯೆಸ್.. ಸೌದಿಯಲ್ಲಿರುವ ಶಿಕ್ಷೆಯನ್ನು ಕೇಳಿದ್ರೆ, ಇಡೀ ಜಗತ್ತೇ ಒಂದು ಕ್ಷಣ ಬೆಚ್ಚಿ ಬಿದ್ದೋಗುತ್ತೇ.. ಇನ್ನೂ ಇಲ್ಲಿ ಕೊಡುವ ಶಿಕ್ಷೆಯನ್ನು ಕಣ್ಣಾರೇ ಏನಾದ್ರೂ ಕಂಡ್ರೆ ಮೈಯಲ್ಲಿ ನಡುಕ ಹುಟ್ಟೋದು ಗ್ಯಾರಂಟಿ. ಖಡ್ಗದಲ್ಲೇ ಉಗ್ರರ, ಕಳ್ಳರ ಶಿರಚ್ಛೇಧನವನ್ನ ಮಾಡಿ ಬಿಡ್ತಾರೆ ಇಲ್ಲಿನ ಭೂಮಿಯಲ್ಲಿ.. ಹೌದು ಇಲ್ಲಿನ ಸರ್ಕಾರವೂ ತಪ್ಪು ಮಾಡಿದವರು ಯಾರೇ ಆಗಿರಲೀ ಹುಡುಕಿಕೊಂಡು ಬಂದು ಗಲ್ಲಿಗೆ ಹಾಕಿ ಶಿಕ್ಷೆಯನ್ನು ಕೊಟ್ಟು ಬಿಡುತ್ತೆ.
 
ಜಗತ್ತಿನ ಯಾವುದೇ ಭಾಗದಲ್ಲೂ ಇಲ್ಲದ ಕಠಿಣ ಕಾನೂನು ಸೌದಿಯಲ್ಲಿದೆ.. ! ಇಲ್ಲಿ ಅದೆಂಥದ್ದೇ ಅಪರಾಧವನ್ನು ಮಾಡಿದ್ರೂ, ಶಿರಚ್ಚೇಧ, ಇಲ್ಲ ಹಿಂದೆ ಮುಂದೇ ನೋಡದೇ ಗುಂಡು ಹೊಡೆಯಲಾಗುತ್ತೆ. ಸಾರ್ವಜನಿಕವಾಗಿ ಛಡಿಯೇಟು ಇಲ್ಲಿನ ಅನೇಕ ಭಾಗಗಳಲ್ಲಿ  ಸರ್ವೇ ಸಾಮಾನ್ಯವೇನೋ ಅನ್ನೋ ಆಗೋಗಿದೆ.. ಈ ಅರಬ್ ಪ್ರಪಂಚದಲ್ಲಿ ಮಾಡಿದ ತಪ್ಪು ಚಿಕ್ಕದಾದರೂ, ಗಂಭಿರವಾದ ಶಿಕ್ಷೆ ನೀಡಲಾಗುತ್ತೆ... ಹಾಗೂ ಇದನ್ನು ಮೀರಿದ ಅಪರಾಧವೇನಾದರೂ, ಮಾಡಿ ಬಿಟ್ಟರೇ, ಅವರ ತಲೆ ಪೀಸ್ ಪಿಸ್ ಆಗಿ ಕತ್ತರಿಸಿ ಬಿಸಾಕಿ ಬಿಡಲಾಗುತ್ತೆ...!

Share this Story:

Follow Webdunia kannada

ಮುಂದಿನ ಸುದ್ದಿ

ಪಾಕಿಸ್ತಾನ್‌ ಪರ ಘೋಷಣೆ ಕೂಗಿದವರು ಬಿಜೆಪಿಯವರೂ- ಡಿ.ಕೆ. ಶಿವಕುಮಾರ್‌