Select Your Language

Notifications

webdunia
webdunia
webdunia
webdunia

ಅಮೆರಿಕದಲ್ಲಿ ಮತ್ತೊಬ್ಬ ಭಾರತೀಯನ ಮೇಲೆ ಶೂಟೌಟ್

ಅಮೆರಿಕದಲ್ಲಿ ಮತ್ತೊಬ್ಬ ಭಾರತೀಯನ ಮೇಲೆ ಶೂಟೌಟ್
Washington , ಭಾನುವಾರ, 5 ಮಾರ್ಚ್ 2017 (09:04 IST)
ವಾಷಿಂಗ್ಟನ್: ಹೈದರಾಬಾದ್ ಟೆಕಿ ಶ್ರೀನಿವಾಸ್ ಹತ್ಯೆ ಪ್ರಕರಣ ಮಾಸುವ ಮೊದಲೇ ಅಮೆರಿಕಾದಲ್ಲಿ ಇನ್ನೊಬ್ಬ ಭಾರತೀಯನ ಮೇಲೆ ಶೂಟೌಟ್ ನಡೆದಿದೆ. ಈ ಬಾರಿಯೂ ದುಷ್ಕರ್ಮಿ ‘ನಿನ್ನ ದೇಶಕ್ಕೆ ಮರಳು’ ಎನ್ನುತ್ತಾ ಗುಂಡಿನ ಮಳೆಗೆರೆದ ಎನ್ನಲಾಗಿದೆ.


ವಾಷಿಂಗ್ಟನ್ ನ್ ಕೆಂಟ್ ನಲ್ಲಿ 39 ವರ್ಷದ ಸಿಖ್ ವ್ಯಕ್ತಿಯ ಮೇಲೆ ದಾಳಿ ನಡೆಸಲಾಗಿದೆ. ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾನೆ. ನಡೆದಾಡುಕೊಂಡು ಹೋಗುತ್ತಿದ್ದ ಭಾರತೀಯನ ಮೇಲೆರಗಿದ ದುಷ್ಕರ್ಮಿ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾನೆ.

ಈ ಬಗ್ಗೆ ಕೆಂಟ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದೊಂದು ಗಂಭೀರ ಪ್ರಕರಣ ಎಂದು ಪೊಲೀಸರು ಬಣ್ಣಿಸಿದ್ದಾರೆ. ದುಷ್ಕರ್ಮಿಯ ಚಹರೆ ಬಗ್ಗೆ ಗಾಯಗೊಂಡ ಭಾರತೀಯ ವ್ಯಕ್ತಿ ಸುಳಿವು ನೀಡಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ರೂ.30 ಸಾವಿರ ತಲುಪಿದ ಬಂಗಾರದ ಬೆಲೆ