Webdunia - Bharat's app for daily news and videos

Install App

ಐಸಿಸ್ ಉಗ್ರರು ಅಪಹರಿಸಿದ್ದ ಕೇರಳದ ಪಾದ್ರಿ ಬಿಡುಗಡೆ

Webdunia
ಮಂಗಳವಾರ, 12 ಸೆಪ್ಟಂಬರ್ 2017 (18:23 IST)
ಐಸಿಸ್ ಉಗ್ರರು ಅಪಹರಿಸಿದ್ದ  ಕೇರಳದ ಪಾದ್ರಿ ಟಾಮ್ ಉಝುನ್ನಾಲಿಯನ್ನ ರಕ್ಷಿಸಲಾಗಿದೆ. 2016ರಿಂದ ಯೆಮೆನ್`ನಿಂದ ಅಪಹರಣಕ್ಕೀಡಾಗಿದ್ದ ಪಾದ್ರಿಯನ್ನ ಓಮನ್ ವಿದೇಶಾಂಗ ಇಲಾಖೆ ಮತ್ತು ಯೆಮೆನ್ ಅಧಿಕಾರಿಗಳ ಕಾರ್ಯಾಚರಣೆಯಲ್ಲಿ ರಕ್ಷಿಸಲಾಗಿದೆ.
 
 

ಸದ್ಯ, ಮಸ್ಕತ್`ನಲ್ಲಿರುವ ಪಾದ್ರಿ  ಟಾಮ್ ಉಝುನ್ನಾಲಿಯನ್ನ ಇಂದು ರಾತ್ರಿ ಕೇರಳಕ್ಕೆ ಕರೆತರಲಾಗುತ್ತಿದೆ. ಈ ಸಂದರ್ಭ ಯೆಮೆನ್  ಸರ್ಕಾರಕ್ಕೆ ಪಾದ್ರಿ ಕೃತಜ್ಞತೆ ಅರ್ಪಿಸಿದ್ದು, ತನ್ನ ರಕ್ಷಣೆಗೆ ಶ್ರಮಿಸಿದ ಗೆಳೆಯರು, ಸಂಬಂಧಿಕರಿಗೆ ಧನ್ಯವಾದ ಹೇಳಿದ್ದಾರೆ. ನಾನು ಯೂರೋಪಿಯನ್ ಪಾದ್ರಿಯಾಗಿದ್ದರೆ ಐಸಿಸ್ ಉಗ್ರರು ಮತ್ತಷ್ಟು ಗಂಭೀರವಾಗಿ ಪರಿಗಣಿಸುತ್ತಿದ್ದರು. ಭಾರತ ಮೂಲದ ಪಾದ್ರಿಯಾದ್ದರಿಂದ ಬಚಾವ್ ಆದೆ ಎಂದಿದ್ದಾರೆ. ಟ್ವಿಟ್ಟರ್`ನಲ್ಲಿ ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಟಾಮ್ ಬಿಡುಗಡೆಯಾಗಿರುವುದನ್ನ ತಿಳಿಸಲು ಸಂತಸವಾಗುತ್ತಿದೆ ಎಂದಿದ್ದಾರೆ.

ಒಮನ್ನಿನ ಸುಲ್ತಾನ್ ಅವರ ಮನವಿ ಮೇರೆಗೆ ಟಾಮ್ ಅವರನ್ನ ರಕ್ಷಿಸುವ ಕಾರ್ಯಾಚರಣೆಯಲ್ಲಿ ಒಮನ್ ಮತ್ತು ಯೆಮನ್ನಿನ ಎರಡೂ ದೇಶಗಳ ಅಧಿಕಾರಿಗಳು ತೊಡಗಿದ್ದರು. ಮಾರ್ಚ್ 2016ರಂದು ಯೆಮನ್ನಿನ ಅದೇನ್ ನಗರದಲ್ಲಿ ಮದರ್ ತೆರೆಸಾ ವೃದ್ಧಾಶ್ರಮದ ಮೇಲೆ ಐಸಿಸ್ ಉಗ್ರರು ದಾಳಿ ನಡೆಸಿದ್ದ ವೇಳೆ ಪಾದ್ರಿ ಟಾಮ್ ಅವರನ್ನ ಅಪಹರಿಸಲಾಗಿತ್ತು. ಈ ಸಂದರ್ಭ ವೃದ್ಧಾಶ್ರಮದ 15 ಮಂದಿಯನ್ನ ಉಗ್ರರು ಕೊಂದಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments