Select Your Language

Notifications

webdunia
webdunia
webdunia
webdunia

ವಿಡಿಯೋ ಗೇಮ್ ನಲ್ಲಿ ತಲ್ಲೀನನಾದ ಈ ಯುವಕ ಏನು ಮಾಡಿದ ನೋಡಿ...

ವಿಡಿಯೋ ಗೇಮ್ ನಲ್ಲಿ ತಲ್ಲೀನನಾದ ಈ ಯುವಕ ಏನು ಮಾಡಿದ ನೋಡಿ...
ಹಾಂಕಾಂಗ್ , ಭಾನುವಾರ, 30 ಜುಲೈ 2017 (11:22 IST)
ಹಾಂಕಾಂಗ್‌: ವಿಡಿಯೊ ಗೇಮ್ ನಲ್ಲಿ ತಲ್ಲೀನನಾಗಿದ್ದ ಯುವಕನೊಬ್ಬ ಬಟ್ಟೆ ಧರಿಸುವುದನ್ನೂ ಮರೆತು ನಗ್ನವಾಗಿ ಮೆಟ್ರೊ ರೈಲಿನಲ್ಲಿ ಪ್ರಯಾಣಿಸಿದ ಘಟನೆ ಹಾಂಕಾಂಗ್‌ನಲ್ಲಿ ನಡೆದಿದೆ.
 
ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದ ಮೆಟ್ರೊ ನಿಲ್ದಾಣದಲ್ಲಿ ಬೂಟುಗಳನ್ನು ಮಾತ್ರ ಧರಿಸಿ ನಗ್ನನಾಗಿ ರೈಲನ್ನೇರಲು ಬಂದ ಯುವಕನನ್ನು ನೋಡಿ ಪ್ರಯಾಣಕರು ಆಘಾತಕ್ಕೊಳಗಾಗಿದ್ದಾರೆ. ಆದರೆ, ಇದನ್ನು ಲೆಕ್ಕಿಸದ ಯುವಕ ಮೊಬೈಲ್‌ಫೋನ್‌ನಲ್ಲಿ ತಲ್ಲೀನನಾಗಿ ರೈಲನ್ನೇರಿ ಪ್ರಯಾಣಿಸಿರುವ ದೃಶ್ಯಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
 
ವಿಷಯ ತಿಳಿದ ಮೆಟ್ರೊ ಅಧಿಕಾರಿಗಳು ಆತನನ್ನು ಬಂಧಿಸಿದ್ದಾರೆ. ಆದರೆ ತಾನು ‘ವಿಡಿಯೊ ಗೇಮ್’ನಲ್ಲಿ ತಲ್ಲೀನನಾಗಿದ್ದು ಬಟ್ಟೆ ಧರಿಸುವುದನ್ನೇ ಮರೆತಿದ್ದೆ ಎಂದು ಯುವಕ ಹೇಳಿಕೆ ನೀಡಿದ್ದಾನೆ. ವಿಡಿಯೋ ಗೇಮ್ ಹುಚ್ಚು ಜನರನ್ನುಏನೆಲ್ಲ ಅವಾಂತರಕ್ಕೆ ತಳ್ಳುತ್ತೆ ಎಂಬುದಕ್ಕೆ ಈ ಘತನೆ ಉದಾಹರಣೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಕೇರಳ: ದುಷ್ಕರ್ಮಿಗಳಿಂದ ಆರೆಸ್ಸೆಸ್ ಕಾರ್ಯಕರ್ತನ ಹತ್ಯೆ