ಕರಾಚಿ : 2021-22ರ ಪಾಕಿಸ್ತಾನದ ಆರ್ಥಿಕ ಸಮೀಕ್ಷೆಯು ಈ ವಾರಿ ಬಿಡುಗಡೆಯಾಗಿದೆ.
ಪಾಕಿಸ್ತಾನದಲ್ಲಿ ಇತರ ಜಾನುವಾರಗಳುಗಳ ನಡುವೆ ಕತ್ತೆಗಳ ಸಂಖ್ಯೆಯಲ್ಲಿ ಸತತ ಮೂರನೇ ವರ್ಷವೂ ಗಮನಾರ್ಹ ಏರಿಕೆಯಾಗಿದೆ.
ಪಾಕಿಸ್ತಾನವು ತನ್ನ ಆರ್ಥಿಕತೆಯ ಬಲ ಪಡಿಸುವ ನಿಟ್ಟಿನಲ್ಲಿ ಕೃಷಿ ಹಾಗೂ ಜಾನುವಾರುಗಳಿಗೆ ಅಧಿಕ ಆದ್ಯತೆಯನ್ನು ನೀಡುತ್ತದೆ. ಅದರಲ್ಲೂ ಪಾಕಿಸ್ತಾನದಲ್ಲಿ ಬಹುತೇಕ ಕತ್ತೆಗಳು ವಿವಿಧ ರೂಪಗಳಲ್ಲಿ ಚೀನಾಕ್ಕೆ ರಫ್ತು ಆಗುತ್ತದೆ.
ಚೀನಾಕ್ಕೆ ರಫ್ತು ಮಾಡುವ ಏಕಮೇವ ಉದ್ದೇಶದೊಂದಿಗೆ ಪಾಕಿಸ್ತಾನದಲ್ಲಿ ಕತ್ತೆಗಳನ್ನು ಸಾಕಲಾಗುತ್ತದೆ. ಪಾಕಿಸ್ತಾನದ ಪಾಲಿಗೆ ಪ್ರಾಣಿ ಎಷ್ಟು ಮುಖ್ಯವಾಗಿದೆ ಎಂದರೆ, 2021ರಲ್ಲಿ ಪಾಕಿಸ್ತಾನದ ಹಿಟ್ ಅನಿಮೇಟೆಡ್ ಚಿತ್ರ "ದಿ ಡಾಂಕಿ ಕಿಂಗ್' ಚೀನಾದಲ್ಲಿ ಬಿಡುಗಡೆಯಾಗಿ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು.
ಇನ್ನು ರಾಜಕೀಯವಾಗಿಯೂ ಪಾಕಿಸ್ತಾನದಲ್ಲಿ ಕತ್ತೆ ಬಹಳ ಪ್ರಮುಖ ಪಾತ್ರ ವಹಿಸಿದೆ. ಕಳೆದ ವರ್ಷದ ಆರ್ಥಿಕ ಸಮೀಕ್ಷೆಯನ್ನೂ ಕತ್ತೆಗಳ ಸಂಖ್ಯೆಯಲ್ಲಿ ಏರಿಕೆ ಕಂಡಿದ್ದಾಗ ಇಮ್ರಾನ್ ಖಾನ್ ಸರ್ಕಾರವು ರಾಷ್ಟ್ರೀಯ ಅಸೆಂಬ್ಲಿಯ ಬಜೆಟ್ ಅಧಿವೇಶನದಲ್ಲಿ ತೀವ್ರ ವಿರೋಧವನ್ನು ಎದುರಿಸಿತ್ತು.
"ಡಾಂಕಿ ರಾಜಾ ಕಿ ಸರ್ಕಾರ್ ನಹೀ ಚಲೇಗಿ' (ಕತ್ತೆಯ ರಾಜನ ಸರ್ಕಾರ ನಡೆಯುವುದಿಲ್ಲ) ಎಂದು ಘೋಷಣೆ ಕೂಗಿ ಟೀಕಿಸಿದ್ದರು.
ಇತ್ತೀಚಿನ ಸಮೀಕ್ಷೆಯ ಪ್ರಕಾರ, 2021-2022ರಲ್ಲಿ ಪಾಕಿಸ್ತಾನದ ಕತ್ತೆಗಳ ಸಂಖ್ಯೆ 5.7 ಮಿಲಿಯನ್ಗೆ ಏರಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಕತ್ತೆಗಳ ಸಂಖ್ಯೆಯಲ್ಲಿ 1 ಲಕ್ಷ ಏರಿಕೆಯಾಗಿದೆ.
2020-21 ರಲ್ಲಿ ಪಾಕಿಸ್ತಾನದಲ್ಲಿ 5.6 ಮಿಲಿಯನ್ ಕತ್ತೆಗಳಿದ್ದರೆ, ಅದಕ್ಕೂ ಹಿಂದಿನ ವರ್ಷ 5.5 ಮಿಲಿಯನ್ ಕತ್ತೆಗಳಿದ್ದವು. ಪ್ರಸ್ತುತ ಪಾಕಿಸ್ತಾನವು ವಿಶ್ವದಲ್ಲಿಯೇ ಗರಿಷ್ಠ ಕತ್ತೆಗಳನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.