Select Your Language

Notifications

webdunia
webdunia
webdunia
webdunia

ಕುಲಭೂಷಣ್ ಜಾದವ್ ರನ್ನು ತಕ್ಷಣವೇ ಗಲ್ಲಿಗೇರಿಸಲು ಮನವಿ

ಕುಲಭೂಷಣ್ ಜಾದವ್ ರನ್ನು ತಕ್ಷಣವೇ ಗಲ್ಲಿಗೇರಿಸಲು ಮನವಿ
Islamabad , ಭಾನುವಾರ, 28 ಮೇ 2017 (16:35 IST)
ಇಸ್ಲಾಮಾಬಾದ್: ಭಾರತೀಯ ನೌಕಾ ಪಡೆ ಮಾಜಿ ಅಧಿಕಾರಿ ಕುಲಭೂಷಣ್ ಜಾದವ್ ರನ್ನು ತಕ್ಷಣವೇ ಗಲ್ಲಿಗೇರಿಸಲು ಪಾಕಿಸ್ತಾನ ಸುಪ್ರೀಂ ಕೋರ್ಟ್ ನಲ್ಲಿ ಮನವಿ ಸಲ್ಲಿಕೆಯಾಗಿದೆ.

 
ಮುಝಾಂ ಅಲಿ ಎಂಬವರ ಪರವಾಗಿ ನ್ಯಾಯವಾದಿ ಫಾರುಕ್ ನಯೀಕ್ ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಿದ್ದಾರೆ. ತಕ್ಷಣವೇ ಗಲ್ಲು ಶಿಕ್ಷೆ ಜಾರಿಗೊಳಿಸಿ ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಬಲೂಚಿಸ್ತಾನದಲ್ಲಿ ಜಾದವ್ ರನ್ನು ಬಂಧಿಸಲಾಗಿತ್ತು ಎಂದು ಪಾಕ್ ಹೇಳಿಕೊಳ್ಳುತ್ತಿದೆ. ಈ ಪ್ರಕರಣದಲ್ಲಿ ವಿಶ್ವ ಸಂಸ್ಥೆಯ ಕಾನೂನು ವಿಭಾಗ ಐಸಿಜೆ ಮಧ್ಯಪ್ರವೇಶಿಸಿ ಗಲ್ಲು ಶಿಕ್ಷೆಗೆ ತಡೆ ನೀಡಿತ್ತು. ಆದರೆ ಐಸಿಜೆ ಅಂತಿಮ ತೀರ್ಪು ಬರುವ ಮೊದಲೇ ಗಲ್ಲು ಶಿಕ್ಷೆ ಜಾರಿಯಾಗಲಿ ಎಂದು ಅರ್ಜಿಯಲ್ಲಿ ಮನವಿ ಸಲ್ಲಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಮೇ 29ರಿಂದ ಮೂರು ದಿನ ಮೆಟ್ರೋ ಸಂಚಾರ ಬಂದ್