Select Your Language

Notifications

webdunia
webdunia
webdunia
webdunia

ಮೇ 29ರಿಂದ ಮೂರು ದಿನ ಮೆಟ್ರೋ ಸಂಚಾರ ಬಂದ್

ಮೇ 29ರಿಂದ ಮೂರು ದಿನ ಮೆಟ್ರೋ ಸಂಚಾರ ಬಂದ್
ಬೆಂಗಳೂರು , ಭಾನುವಾರ, 28 ಮೇ 2017 (16:32 IST)
ಬೆಂಗಳೂರು: ಸಂಪಿಗೆ ರಸ್ತೆ-ಯಲಚೇನಹಳ್ಳಿ ನಡುವಿನ ನೂತನ ಮೆಟ್ರೋ ಮಾರ್ಗವನ್ನು ರೈಲ್ವೆ ಸುರಕ್ಷತಾ ಆಯುಕ್ತರ ನೇತೃತ್ವದ ತಂಡ ಪರಿಶೀಲನೆ ನಡೆಸಲಿರುವ ಹಿನ್ನೆಲೆಯಲ್ಲಿ ಮೇ 29ರಿಂದ 31ರವರೆಗೆ ರಾಜಾಜಿನಗರ-ಸಂಪಿಗೆ ರಸ್ತೆ ನಿಲ್ದಾಣದ ನಡುವೆ ಮೆಟ್ರೋ ಸಂಚಾರ ಸ್ಥಗಿತಗೊಳಿಸಲಾಗಿದೆ.
 
ಈ 3 ದಿನ ಶ್ರೀರಾಂಪುರ, ಕುವೆಂಪು ರಸ್ತೆ ಹಾಗೂ ಸಂಪಿಗೆ ರಸ್ತೆ ಮೆಟ್ರೋ ನಿಲ್ದಾಣಗಳು ಮುಚ್ಚಿರಲಿವೆ. ನಾಗಸಂದ್ರದಿಂದ ರಾಜಾಜಿನಗರದವರೆಗೆ ಮಾತ್ರ ಮೆಟ್ರೋ ಸಂಚರಿಸಲಿದ್ದು, ರಾಜಾಜಿನಗರದಿಂದ ಮೆಜೆಸ್ಟಿಕ್ ಕೆಂಪೇಗೌಡ ಮೆಟ್ರೋ ನಿಲ್ದಾಣದವರೆಗೆ ಮೆಟ್ರೋ ಫೀಡರ್ ಸೇವೆಗಳನ್ನು ಒದಗಿಸಲಾಗುವುದು ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
 
ಹಸಿರು ಮೆಟ್ರೋ ಮಾರ್ಗದಲ್ಲಿ 29ರಿಂದ ರೈಲ್ವೆ ಸುರಕ್ಷತಾ ಆಯುಕ್ತ ಕೆ.ಎ. ಮನೋಹರನ್ ನೇತೃತ್ವದ ತಂಡ ಪರಿಶೀಲನೆ ಆರಂಭಿಸಲಿದೆ. 30ರಂದು ಸಂಪಿಗೆ ರಸ್ತೆ, ಕೆ.ಆರ್.ಮಾರುಕಟ್ಟೆ ನಡುವಿನ ಮೆಟ್ರೋ ಸುರಂಗ ಮಾರ್ಗದ ಪರಿಶೀಲನೆ, 31ರಂದು ರೈಲಿನ ವೇಗದ ಪರೀಕ್ಷೆ ನಡೆಯಲಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಮನ್ ಕಿ ಬಾತ್: ದೇಶದ ಜನತೆಗೆ ರಂಜಾನ್ ಶುಭಕೋರಿದ ಪ್ರಧಾನಿ ಮೋದಿ