Select Your Language

Notifications

webdunia
webdunia
webdunia
webdunia

ವಿಚಿತ್ರ ಲೈಂಗಿಕ ಸುಖಕ್ಕಾಗಿ 15 ಸೂಜಿಗಳನ್ನ ಮರ್ಮಾಂಗಕ್ಕೆ ಚುಚ್ಚಿಕೊಂಡಿದ್ದ ವ್ಯಕ್ತಿ..!

ವಿಚಿತ್ರ ಲೈಂಗಿಕ ಸುಖಕ್ಕಾಗಿ 15 ಸೂಜಿಗಳನ್ನ ಮರ್ಮಾಂಗಕ್ಕೆ ಚುಚ್ಚಿಕೊಂಡಿದ್ದ ವ್ಯಕ್ತಿ..!
ಬೀಜಿಂಗ್ , ಭಾನುವಾರ, 25 ಜೂನ್ 2017 (15:26 IST)
ಅಚ್ಚರಿಕರ ಬೆಳವಣಿಗೆಯೊಂದರಲ್ಲಿ ಚೀನಾದ ಲಿಯಾನಿಂಗ್ ಪ್ರದೇಶದ ಸಾರ್ವಜನಿಕ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕಕ್ಕೆ 35 ವರ್ಷದ ವ್ಯಕ್ತಿಯೊಬ್ಬ ತೀವ್ರ ನೋವಿನಿಂದ ವ್ಹೀಲ್ ಚೇರ್`ನಲ್ಲಿ ಆಗಮಿಸುತ್ತಾನೆ. ಆತನ ಸ್ಥಿತಿ ಕಂಡ ವೈದ್ಯರು ಅಕ್ಷರಶಃ ಬೆಚ್ಚಿಬೀಳುತ್ತಾರೆ.
 

ಹೌದು, ಆತನ ಮರ್ಮಾಂಗದಲ್ಲಿ 15 ಸೂಜಿಗಳು ಸೇರಿಕೊಂಡಿರುತ್ತವೆ. ವರ್ಷದ ಹಿಂದಷ್ಟೇ ಈತ ಸೂಜಿಗಳನ್ನ ಮರ್ಮಾಂಗಕ್ಕೆ ಚುಚ್ಚಿಕೊಂಡಿರುತ್ತಾನೆ. ಇದೀಗ, ಅದರ ಪರಿಣಾಮ ಮೂತ್ರ ಮಾಡುವಾಗ ನೋವು ಮತ್ತು ರಕ್ತಸ್ರಾವ ಕಂಡುಬರುತ್ತದೆ. ಹೀಗಾಗಿ, ವೈದ್ಯರ ಬಳಿ ಚಿಕಿತ್ಸೆಗೆ ಬಂದಿರುತ್ತಾನೆ.

ವೈದ್ಯರು ವಿಚಾರಿಸಿದಾಗ ತಾನೇ ಸೂಜಿಗಳನ್ನ ಹಾಕಿಕೊಂಡಿರುವುದಾಗಿ ಹೇಳುತ್ತಾನೆ. ಸ್ಯಾಡೊಮಸೊಚಿಸ್ಟಿಕ್ ಸೆಕ್ಸುವಲ್ ಸುಖಕ್ಕಾಗಿ ಈತ ಈ ರೀತಿ ಮಾಡಿಕೊಂಡಿರಬಹುದೆಂದು ವೈದ್ಯರು ತಿಳಿಸಿದ್ದಾರೆ. ಡಿ ಎಕ್ಸ್ ರೇ ವೇಳೆ ಮರ್ಮಾಂಗದಲ್ಲಿ ಸೂಜಿಗಳಿರುವುದು ಕಂಡುಬಂದಿದೆ. ವೈದ್ಯರು ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ನಡೆಸಿ ಸೂಜಿಗಳನ್ನ ಹೊರ ತೆಗೆದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಂದಿ ಹೀಲ್ಸ್ ನಲ್ಲಿ ಜುಲೈ 1ರಿಂದ ಫೋರ್ ವೀಲರ್ ಗೆ ನಿಷೇಧ