Select Your Language

Notifications

webdunia
webdunia
webdunia
webdunia

ಶ್ರೀಲಂಕಾದಲ್ಲಿ ಭಾರಿ ಮಳೆಗೆ ಮಣ್ಣು ಕುಸಿದು 90 ಸಾವು

ಶ್ರೀಲಂಕಾದಲ್ಲಿ ಭಾರಿ ಮಳೆಗೆ ಮಣ್ಣು ಕುಸಿದು 90 ಸಾವು
ಕೊಲಂಬೋ , ಶನಿವಾರ, 27 ಮೇ 2017 (10:57 IST)
ನೆರೆಯ ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲೀಗ ನೆರೆ ಹಾವಳಿ.  ಭೀಕರ ಬಿರುಗಾಳಿ ಸಹಿತ ಭಾರೀ ಮಳೆಗೆ ಕಳೆದೊಂದು ವಾರದಿಂದ ಭೂಮಿ ಕುಸಿದು 90ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, 100ಕ್ಕೂ ಅಧಿಕಮಂದಿ ನಾಪತ್ತೆಯಾಗಿದ್ದಾರೆ.
 

ನೌಕಾಪಡೆಯ ಹದಗುಗಳು ಮತ್ತು ಹೆಲಿಕಾಪ್ಟರ್`ಗಳನ್ನ ರಕ್ಷಣೆಗೆ ನಿಯೋಜಿಸಲಾಗಿದೆ. ದ್ವೀಪ ರಾಷ್ಟ್ರದ ನೆರವಿಗೆ ಭಾರತದ 3 ನೌಕಾಪಡೆಯ ಹದಗುಗಳನ್ನೂ ರವಾನಿಸಲಾಗಿದೆ. ಐಎನ್ಎಸ್ ಕಿರ್ಚ್ ಬಂಗಾಳಕೊಲ್ಲಿಯಿಂದ ನೇರ ಕೊಲಂಬೋ ಕಡೆಗೆ ಹಡಗುಗಳು ತೆರಳಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ. ವೈದ್ಯಕೀಯ ಸೌಲಭ್ಯ ಮತ್ತು ಮುಳುಗು ತಜ್ಞರನ್ನೊಳಗೊಂಡ ಐಎನ್ಎಸ್ ಶಾರ್ದೂಲ್ ಕೊಚ್ಚಿಯಿಂದ ತೆರಳಿದೆ.

ಇದರ ಜೊತೆಗೆ ವಿಶಾಖಪಟ್ಟಣದಿಂದ ಆಹಾರ, ಮೆಡಿಕಲ್ ಕಿಟ್, ಬಟ್ಟೆ, ನೀರು, ಮುಳುಗು ತಜ್ಞರು ಮತ್ತು ರಕ್ಷಣಾ ಹೆಲಿಕಾಪ್ಟರ್ ಒಳಗೊಂಡ ಐಎನ್ಎಸ್ ಜಲಶ್ವ ಹಡಗು ಸಹ ಕೊಲಂಬೋಗೆ ತೆರಳಲಿದೆ.

ಶ್ರೀಲಂಕಾದ ಪಶ್ಚಿಮ ಕರಾವಳಿಯ ಕಲುತರಾ ಜಿಲ್ಲೆಯ 5 ಕಡೆ ಭಾರೀ ಪ್ರಮಾಣದ ಭೂಕುಸಿತದ ವರದಿಯಾಗಿದೆ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಪ್ರಧಾನಮಮತ್ರಿ ನರೇಂದ್ರಮೋದಿ ಮೃತರಿಗೆ ಸಂತಾಪ ಸೂಚಿಸಿದ್ದು, ಬೇಕಾದ ಎಲ್ಲ ನೆರವಿನ ಭರವಸೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಜೂನ್ 12ರಂದು ಕರ್ನಾಟಕ ಬಂದ್ ಗೆ ಕರೆ