Select Your Language

Notifications

webdunia
webdunia
webdunia
webdunia

ವೈಟ್ ಹಾಲ್ ನ ಗೌರವಾನ್ವಿತ ಮೇಯರ್ ಪಟ್ಟ ಗಿಟ್ಟಿಸಿಕೊಂಡ 7 ತಿಂಗಳ ಮಗು

ವೈಟ್ ಹಾಲ್ ನ ಗೌರವಾನ್ವಿತ ಮೇಯರ್ ಪಟ್ಟ ಗಿಟ್ಟಿಸಿಕೊಂಡ 7 ತಿಂಗಳ ಮಗು
ಅಮೇರಿಕಾ , ಶುಕ್ರವಾರ, 20 ಡಿಸೆಂಬರ್ 2019 (06:22 IST)
ಅಮೇರಿಕಾ : ಟೆಕ್ಸಾಸ್ ನ ವೈಟ್ ಹಾಲ್ ನ ಗೌರವಾನ್ವಿತ ಮೇಯರ್ ಆಗಿ 7 ತಿಂಗಳ ಮಗುವೊಂದು ಪ್ರಮಾಣವಚನ ಸ್ವೀಕರಿಸಿದ್ದು, ಆ ಮೂಲಕ ಅಮೇರಿಕಾದ ಇತಿಹಾಸದಲ್ಲಿಯೇ ಆತ ಅತ್ಯಂತ ಕಿರಿಯ ಮೇಯರ್ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ.



ವಿಲಿಯಂ ಚಾರ್ಲ್ಸ್ “ಚಾರ್ಲಿ” ಮೆಕ್ ಮಿಲಿಯನ್ ಎಂಬ ಹೆಸರಿನ ಈ 7 ವರ್ಷದ ಮಗುವಿಗೆ ಮೇಯರ್ ಚಾರ್ಲಿ ಎಂದು ಕರೆಯಲಾಗಿದ್ದು, ಇತನ ಪ್ರಮಾಣವಚನ ಸಮಾರಂಭವು ವೈಟ್ ಹಾಲ್ ನ ಸಮುದಾಯ ಕೇಂದ್ರದಲ್ಲಿ ನಡೆಸಲಾಗಿದ್ದು, ಇದರಲ್ಲಿ 150ಕ್ಕೂ ಹೆಚ್ಚು ಮಂದಿ ಅತಿಥಿಗಳು ಭಾಗವಹಿಸಿದ್ದಾರೆ.

 

ವರದಿ ಪ್ರಕಾರ, ಗೌರವಾನ್ವಿತ ಮೇಯರ್ ಪಾತ್ರವನ್ನು ಸಾಮಾನ್ಯವಾಗಿ ಪ್ರತಿವರ್ಷ ವೈಟ್ ಹಾಲ್  ಸ್ವಯಂ ಸೇವಕ ಅಗ್ನಿ ಶಾಮಕ ಇಲಾಖೆಯ ಬಿಬಿಕ್ಯೂ ನಿಧಿ ಸಂಗ್ರಹದ  ಸಮಯದಲ್ಲಿ ಅತಿ ಹೆಚ್ಚು ಬಿಡ್ಡ್ ಮಾಡಿದವರಿಗೆ ಹರಾಜು ಮಾಡಲಾಗುತ್ತದೆ. ಆದಕಾರಣ ವೈಟ್ ಹಾಲ್ ಮತ್ತು ಸುತ್ತಮುತ್ತಲಿನ ಸಮುದಾಯಗಳ ನಿವಾಸಿಗಳಿಗೆ ಚಾರ್ಲಿ ಮೇಯರ್ ಆಗಿ ಒಂದು ವರ್ಷದ ಕಾಲ  ಸೇವೆ ಸಲ್ಲಿಸಲಿದ್ದಾನೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಅಶ್ಲೀಲ ವೆಬ್ ಸೈಟ್ ಗಳ ಮೇಲೆ ಬಿಷಪ್ ಕೆಂಗಣ್ಣು