Select Your Language

Notifications

webdunia
webdunia
webdunia
webdunia

ಬ್ರಿಟನ್ ರಾಣಿಗೆ ಬರ್ತ್ ಡೇ ಪಾರ್ಟಿಗೆ ಆಹ್ವಾನವಿತ್ತ ಭಾರತೀಯ ಪೋರ!

ಬ್ರಿಟನ್ ರಾಣಿಗೆ ಬರ್ತ್ ಡೇ ಪಾರ್ಟಿಗೆ ಆಹ್ವಾನವಿತ್ತ ಭಾರತೀಯ ಪೋರ!
London , ಮಂಗಳವಾರ, 9 ಮೇ 2017 (11:48 IST)
ಲಂಡನ್: ಸಾಮಾನ್ಯವಾಗಿ ಬರ್ತ್ ಡೇ ಪಾರ್ಟಿ ಮಾಡುವಾಗ ಯಾರು ಆಹ್ವಾನಿತರಿರುತ್ತಾರೆ? ನಮ್ಮ ಸ್ನೇಹಿತರು, ಬಂಧುಗಳು ಅಷ್ಟೇ. ಆದರೆ ಈ ಪೋರ ತನ್ನ ಬರ್ತ್ ಡೇ ಪಾರ್ಟಿಗೆ ಬ್ರಿಟನ್ ರಾಣಿಯನ್ನು ಆಹ್ವಾನಿಸಿ ಸುದ್ದಿಯಾಗಿದ್ದಾನೆ.

 
ಭಾರತೀಯ ಮೂಲದ ಶಾನ್ ದುಲೇ ಎಂಬ ಈ ಪೋರ ರಾಣಿ ಎಲೆಜಬೆತ್ ಬಗ್ಗೆ ತನ್ನ ಪಠ್ಯದಲ್ಲಿ ಸಾಕಷ್ಟು ಓದಿದ್ದನಂತೆ. ಅದಕ್ಕೇ ರಾಣಿಯನ್ನು ಒಮ್ಮೆ ನೋಡಿ ಮಾತನಾಡಿಸಬೇಕೆಂದು ಆಸೆಯಾಗಿದೆ.

ತನ್ನ ಅಮ್ಮನ ಬಳಿ ರಾಣಿಯನ್ನು ನೋಡಲು ಹೋಗೋಣವೆಂದಾಗ ಸಾಮಾನ್ಯ ಅಮ್ಮನಂತೆ ಆಕೆ, ರಾಣಿ ತುಂಬಾ ಬ್ಯುಸಿ ಇರ್ತಾರೆ ಎಂದೆಲ್ಲಾ ಸಮಾಧಾನಿಸಿದ್ದಳು. ಅಷ್ಟಕ್ಕೇ ಸುಮ್ಮನಾಗದ ಆತ ನೇರವಾಗಿ ರಾಣಿಗೆ ಪತ್ರ ಬರೆದು ನಿಮ್ಮನ್ನು ನಾನು ನೋಡಬೇಕು, ಬಡ ಜನರ ಬಗ್ಗೆ ಮಾತನಾಡಬೇಕು. ನನ್ನ ಬರ್ತ್ ಡೇ ಪಾರ್ಟಿಗೆ ಬನ್ನಿ ಎಂದು ಆಹ್ವಾನಿಸಿದ್ದಾನೆ.

ವಿಶೇಷವೆಂದರೆ ನಾಲ್ಕರ ಪೋರನ ಪತ್ರಕ್ಕೆ ರಾಣಿ ಕೂಡಾ ಪ್ರತಿಕ್ರಿಯಿಸಿದ್ದಾರೆ. ನಿನ್ನ ಮನೆಗೆ ಬರಲು ನನಗೆ ಸಮಯವಿಲ್ಲ. ಆದರೆ ನಿನ್ನ ಆಸಕ್ತಿ ತಿಳಿದು ಖುಷಿಯಾಯಿತು. ಜನುಮ ದಿನದ ಶುಭಾಷಯಗಳು’ ಎಂದು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಸುಪ್ರೀಂಕೋರ್ಟ್ ನ್ಯಾಯಾಧೀಶರಿಗೇ ಶಿಕ್ಷೆ ವಿಧಿಸಿದ ನ್ಯಾಯಮೂರ್ತಿಗೆ ಜೈಲು ಶಿಕ್ಷೆ!