ಇಸ್ಲಾಮಾಬಾದ್ : ಸಾರ್ವಜನಿಕ ಆಸ್ಪತ್ರೆಯೊಂದರ ಮೇಲ್ಛಾವಣಿಯಲ್ಲಿ 200 ಕೊಳೆತ ಮೃತದೇಹಗಳು ಪತ್ತೆಯಾದ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿದೆ.
ಪಂಜಾಬ್ನ ಮುಖ್ಯಮಂತ್ರಿ ಚೌಧರಿ ಜಮಾನ್ ಗುಜ್ಜರ್ ಅವರು ನಿಶ್ತಾರ್ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿದ್ದ ಓರ್ವ ವ್ಯಕ್ತಿಯು, ನೀವು ಏನಾದರೂ ಒಳ್ಳೆಯ ಕಾರ್ಯ ಮಾಡಲು ಬಯಸಿದ್ದರೇ ಶವಾಗಾರಕ್ಕೆ ಹೋಗಿ ಪರೀಕ್ಷಿಸಿ ಎಂದಿದ್ದರು.
ಈ ಹಿನ್ನೆಲೆಯಲ್ಲಿ ಶವಗಾರಕ್ಕೆ ಹೋಗಿದ್ದ ಮುಖ್ಯಮಂತ್ರಿ, ಸಿಬ್ಬಂದಿ ಬಳಿ ಬಾಗಿಲು ತೆಗೆಯಲು ಹೇಳಿದಾಗ ಆತ ಬಾಗಿಲು ತೆರೆಯಲು ನಿರಾಕರಿಸಿದ. ಆಗ ಸಿಎಂ ಬಾಗಿಲು ತೆರೆಯದಿದ್ದರೇ ಎಫ್ಐಆರ್ ದಾಖಲಿಸುವುದಾಗಿ ಎಚ್ಚರಿಸಿದ್ದರು.
ಆ ನಂತರ ಬಾಗಿಲನ್ನು ತೆರೆದಾಗ ಅಲ್ಲಿ ಸುಮಾರು 200 ಕೊಳೆತ ಶವ ಪತ್ತೆ ಆಗಿದೆ. ಈ ಹಿನ್ನೆಲೆಯಲ್ಲಿ ಘಟನೆಗೆ ಸಂಬಂಧಿಸಿ ತನಿಖೆಗೆ ಆಗ್ರಹಿಸಲಾಗಿದೆ ಎಂದು ಪಂಜಾಬ್ನ ಮುಖ್ಯಮಂತ್ರಿ ತಿಳಿಸಿದ್ದಾರೆ.