Select Your Language

Notifications

webdunia
webdunia
webdunia
webdunia

ಪಾಕಿಸ್ತಾನದಲ್ಲಿ ಬಾಂಬ್ ಸ್ಟೋಟಕ್ಕೆ 18 ಬಲಿ

18 kill
ಪರಾಚಿನಗರ , ಶನಿವಾರ, 21 ಜನವರಿ 2017 (11:17 IST)
ಪಾಕಿಸ್ತಾನದಲ್ಲಿ ಮತ್ತೆ ಬಾಂಬ್ ಸ್ಪೋಟವಾಗಿದ್ದು, ಇಂದು ಮುಂಜಾನೆ ಪರಾಚಿನಗರದಲ್ಲಿ ನಡೆಸಲಾದ ವಿಧ್ವಂಸಕ ಕೃತ್ಯದಲ್ಲಿ 18 ಜನರು ಮೃತಪಟ್ಟಿದ್ದಾರೆ. 
ಕುರ್ರಂ ತರಕಾರಿ ಮಾರುಕಟ್ಟೆಯಲ್ಲಿ ಈ ಸ್ಪೋಟ ಸಂಭವಿಸಿದ್ದು, ಘಟನೆಯಲ್ಲಿ 15 ಜನರಿಗೆ ಗಾಯವಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
 
ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ ಸಬ್ಜಿ ಮಂಡಿಯಲ್ಲಿ ಬಾಂಬ್ ಸ್ಪೋಟಿಸಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.
 
ಇಲ್ಲಿಯವರೆಗೂ ಯಾವ ಸಂಘಟನೆಯೂ ಘಟನೆಯ ಹೊಣೆ ಹೊತ್ತುಕೊಂಡಿಲ್ಲ.
 
ಘಟನೆ ನಡೆದ ಸ್ಥಳವನ್ನು ಸುತ್ತುವರೆದಿರುವ ಭದ್ರತಾ ಪಡೆ ಪರಿಶೀಲನೆಯನ್ನು ಕೈಗೊಂಡಿದೆ. ಆರೋಪಿಗಳ ಪತ್ತೆಗೆ ತನಿಖೆ ಮುಂದುವರೆದಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಇಸ್ಲಾಮಿಕ್ ಉಗ್ರರಿಗಿನ್ನು ಟ್ರಂಪ್ ಟ್ರಬಲ್