Webdunia - Bharat's app for daily news and videos

Install App

ಒಂದೇ ದಿನದಲ್ಲಿ ಡೆನ್ಮಾರ್ಕ್ ನ ಫಾರೋ ದ್ವೀಪಗಳಲ್ಲಿ 1400 ಡಾಲ್ಫಿನ್ ಗಳ ಮಾರಣಹೋಮ

Webdunia
ಗುರುವಾರ, 16 ಸೆಪ್ಟಂಬರ್ 2021 (13:45 IST)
ಅಟ್ಲಾಂಟಿಕ್ : ಸ್ವಾಯತ್ತ ಡ್ಯಾನಿಶ್ ಪ್ರದೇಶವಾದ ಫಾರೋ ದ್ವೀಪಗಳಲ್ಲಿ ಡಾಲ್ಫಿನ್ ಬೇಟೆಯಾಡುವ ಅಭ್ಯಾಸವು ಮಂಗಳವಾರ 1,400ಕ್ಕೂ ಹೆಚ್ಚು ಸಸ್ತನಿಗಳು ಸಾವಿಗೆ ಕಾರಣವಾಗಿದ್ದು, ಈ ಹಿನ್ನೆಲೆಯಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
Photo Courtesy: Google

ಉತ್ತರ ದ್ವೀಪಸಮೂಹದಲ್ಲಿ ಒಂದೇ ದಿನದಲ್ಲಿ 1400 ಕ್ಕೂ ಹೆಚ್ಚು ಬಿಳಿ ಬದಿಯ ಡಾಲ್ಫಿನ್ ಗಳನ್ನು ಕೊಲ್ಲಲಾಯಿತು. 50,000 ಜನಸಂಖ್ಯೆಯನ್ನು ಹೊಂದಿರುವ ಉತ್ತರ ಅಟ್ಲಾಂಟಿಕ್ ದ್ವೀಪಗಳು ಸಾಮಾನ್ಯವಾಗಿ ಪೈಲಟ್ ತಿಮಿಂಗಿಲಗಳನ್ನು ಬೇಟೆಯಾಡಲು ತೊಡಗುತ್ತವೆಯೇ ಹೊರತು ಡಾಲ್ಫಿನ್ ಗಳಲ್ಲ ಎಂದು ವಕ್ತಾರರು ತಿಳಿಸಿದ್ದಾರೆ.
ಏತನ್ಮಧ್ಯೆ, ಸ್ಥಳೀಯ ದೂರದರ್ಶನ ಪತ್ರಕರ್ತ ಹಲ್ಲೂರ್ ಅವ್ ರಾನ್ ಅವರು ಹೇಳುವಂತೆ, 'ಸಾಮಾನ್ಯವಾಗಿ ಅವರಲ್ಲಿ ಕೆಲವರು 'ಗ್ರೈಂಡ್' ನಲ್ಲಿ ಇರುತ್ತಾರೆ, ಆದರೆ ನಾವು ಸಾಮಾನ್ಯವಾಗಿ ಅಂತಹ ದೊಡ್ಡ ಸಂಖ್ಯೆಯಲ್ಲಿ ದಾಲ್ಫಿನ್ ಕೊಲ್ಲುವುದಿಲ್ಲ ಎಂದು ಹೇಳಿದ್ದಾರೆ.
ದ್ವೀಪಗಳು 'ಗ್ರಿಂಡರಾಪ್' ಅಭ್ಯಾಸವನ್ನು ಅನುಸರಿಸುತ್ತವೆ, ಇದರಿಂದ ಬೇಟೆಗಾರರು ತಿಮಿಂಗಿಲಗಳನ್ನು ಮೀನುಗಾರಿಕಾ ದೋಣಿಗಳ ಅಗಲವಾದ ಅರೆ-ವೃತ್ತದಿಂದ ಸುತ್ತುವರೆಯಲು ಪ್ರಯತ್ನಿಸುತ್ತಾರೆ, ಅಲ್ಲಿ ಅವುಗಳನ್ನು ಕಡಲತೀರ ಮತ್ತು ವಧೆ ಮಾಡುವ ಕೊಲ್ಲಿಗೆ ಓಡಿಸುತ್ತಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ 1,000 ಕ್ಕೂ ಹೆಚ್ಚು ಅಟ್ಲಾಂಟಿಕ್ ಬಿಳಿ ಬದಿಯ ಡಾಲ್ಫಿನ್ ಗಳ ರಕ್ತಸಿಕ್ತ ಶವಗಳ ಫೋಟೋಗಳು ಆಕ್ರೋಶಕ್ಕೆ ಕಾರಣವಾಯಿತು. ದ್ವೀಪಗಳ ಜನಸಂಖ್ಯೆಯ 53 ಪ್ರತಿಶತ ಜನರು 'ಗ್ರೈಂಡ್' ಅನ್ನು ವಿರೋಧಿಸುತ್ತಿದ್ದರೂ, ಈ ಪದ್ಧತಿಯನ್ನು ರದ್ದುಗೊಳಿಸುವ ಯಾವುದೇ ಯೋಜನೆಗಳಿಲ್ಲ ಎಂದು ವಕ್ತಾರರು ತಿಳಿಸಿದ್ದಾರೆ.
ತಿಮಿಂಗಿಲಗಳು ಮತ್ತು ಡಾಲ್ಫಿನ್ ಗಳ ಬೇಟೆಯ ವಿರುದ್ಧ ಪ್ರಚಾರ ಮಾಡುತ್ತಿರುವ ಚಾರಿಟಿ ಸೀ ಶೆಫರ್ಡ್ ಈ ಅಭ್ಯಾಸವನ್ನು ಅನಾಗರಿಕ ಎಂದು ಬಣ್ಣಿಸಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Caste census report: ಜಾತಿಗಣತಿ ವರದಿ ಹೊರಹಾಕಲು ಹೊರಟಿದ್ದ ಸಿಎಂ ಸಿದ್ದರಾಮಯ್ಯ ಗಪ್ ಚುಪ್ ಆಗಿದ್ದೇಕೆ

ವಕ್ಫ್ ತಿದ್ದುಪಡಿ ಕಾಯಿದೆ ತಂದಿದ್ದಕ್ಕೆ ಥ್ಯಾಂಕ್ಯೂ ಮೋದಿಜಿ ಎಂದು ಪ್ರಧಾನಿ ಭೇಟಿಯಾದ ಮುಸ್ಲಿಮರು: Video

ಕಾಂಗ್ರೆಸ್‌ ಜನಪೀಡಕ ಸರ್ಕಾರ: ಗುಡುಗಿದ ಬಿವೈ ವಿಜಯೇಂದ್ರ

Waqf Bill: ವಕ್ಫ್ ತಿದ್ದುಪಡಿ ಕಾಯ್ದೆಗೆ ಸುಪ್ರೀಂಕೋರ್ಟ್ ಅಂಕುಶ: ತೀರ್ಪಿನಲ್ಲಿ ಹೇಳಿದ್ದೇನು

ನಾವು ಹಾಲಿನ ದರ ಹೆಚ್ಚಳ ಮಾಡಿದ್ದು ರೈತರಿಗೆ ಸಿಗ್ತಿದೆ, ಮೋದಿ ಗ್ಯಾಸ್ ಸಬ್ಸಿಡಿ ರದ್ದು ಮಾಡಿದ್ದು ಯಾರಿಗೆ ಸಿಗ್ತಿದೆ: ಸಿದ್ದರಾಮಯ್ಯ

ಮುಂದಿನ ಸುದ್ದಿ
Show comments